ದಾಂಡೇಲಿ : ಕಳೆದ ಒಂದು ವರ್ಷದಿಂದ ನಗರ ಹಾಗೂ ನಗರದ ಸುತ್ತಮುತ್ತಲು ಮೊಸಳೆಗಳ ಹಾವಳಿ ವ್ಯಾಪಕವಾಗಿರುವುದರ ಜೊತೆಯಲ್ಲಿ ಜೀವ ಬಲಿ ಪಡೆದಿರುವಂತಹ ಘಟನೆಗಳು ಸುದ್ದಿಯಾಗಿದೆ.
ಮೊಸಳೆಗಳ ದಾಳಿಯಿಂದ ಮುನ್ನೆಚ್ಚರಿಕೆ ವಹಿಸಿಕೊಳ್ಳಲು ಈಗಾಗಲೆ ಅರಣ್ಯ ಇಲಾಖೆ, ನಗರ ಸಭೆ, ಕಂದಾಯ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಆದಾಗ್ಯೂ ಮೊಸಳೆಗಳ ಸಂಖ್ಯೆಯ ಏರುತ್ತಿರುವುದರಿಂದ ಅಲ್ಲಿ ಇಲ್ಲಿ ಎಂದು ಮೊಸಳೆಗಳು ಪ್ರತ್ಯಕ್ಷವಾಗುತ್ತಿರುವುದು ಸಾಮಾನ್ಯ ಎಂಬಂತಾಗಿದೆ. ಅದಕ್ಕೆ ಪುಷ್ಟಿ ನೀಡುವಂತೆ ನಗರದ ಸಮೀಪ ವಇರುವ ಕೇರವಾಡದ ಶ್ರೇಯಸ್-ಶ್ರೀನಿಧಿ ಕಾರ್ಖಾನೆಯ ಹತ್ತಿರದಲ್ಲಿ ಹಾದು ಹೋಗುವ ದಾಂಡೇಲಿ-ಹಳಿಯಾಳ ರಾಜ್ಯ ಹೆದ್ದಾರಿಯಲ್ಲಿ ಮೊಸಳೆಯೊಂದು ಪ್ರತ್ಯಕ್ಷಗೊಂಡ ಆತಂಕ ಸೃಷ್ಟಿಸಿದೆ. ಯಾರಿಗೂ ಏನೇ ಮಾಡದಿದ್ದರೂ, ಈ ರೀತಿ ರಸ್ತೆ ಮೇಲೆ ಮೊಸಳೆಗಳು ಅಡ್ಡಾಡಿದರೇ ಮುಂದೇ ಹೇಗೆ ಎಂಬ ಚಿಂತೆ ಜನತೆಯನ್ನು ಕಾಡತೊಡಗಿದೆ.