ಅಂಕೋಲಾ : ಯುವತಿಯರ ನಾಪತ್ತೆ ಪ್ರಕರಣಗಳು ಮತ್ತೆ ಬೆಳಕಿಗೆ ಬರುತ್ತಿದ್ದು, ಹೋಂಮ್ ನರ್ಸಿಂಗ್ ಕೆಲಸಕ್ಕೆಂದು ಬೆಂಗಳೂರು ಬಸ್ ಹತ್ತಿದ ಅಪ್ರಾಪ್ತ ಯುವತಿಯೊಬ್ಬಳು ನಾಪತ್ತೆಯಾದ ಬಗ್ಗೆ ಯುವತಿಯ ತಂದೆ ದೂರು ದಾಖಲಿಸಿದ್ದಾರೆ. 17 ವರ್ಷ ವಯಸ್ಸಿನ ಅಂಕೋಲಾ ರಾಮನಗುಳಿಯ ತಾಲೂಕಿನ ಮಳಲಗಾಂವದ ನಿವಾಸಿ ನಾಪತ್ತೆಯಾದ ಯುವತಿ.

ಸೆ.2 ರಂದು ತನ್ನ ಮನೆಯಿಂದ ಹೊರಟು ಯಲ್ಲಾಪುರದಿಂದ ಬೆಂಗಳೂರು ಬಸ್ ಹತ್ತಿದ ಯುವತಿ ನಂತರ ಬೆಂಗಳೂರು ತಲುಪಿದ ಬಗ್ಗೆ ಮಾಹಿತಿ ನೀಡಿರಲಿಲ್ಲ. ಯುವತಿಯ ಮೊಬೈಲ್ ಸ್ವಿಚ್ ಆಪ್ ಆಗಿದ್ದು ಅವಳ ಗೆಳತಿಯರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ಸಿಕ್ಕಿಲ್ಲ ಎನ್ನಲಾಗಿದೆ. ಈ ಕುರಿತು ಯುವತಿಯ ತಂದೆ ದೂರು ನೀಡಿದ್ದಾರೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES  ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಕುರಿತಂತೆ ಬಾಲಕಿಯ ತಂದೆ ಹಳವಳ್ಳಿ ಮಳಲಗಾಂವ ನಿವಾಸಿ ತಮ್ಮ ಮಗಳನ್ನು ಅಪಹರಣ ಮಾಡಲಾಗಿದ್ದು ಹುಡುಕಿ ಕೊಡುವಂತೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಈ ಪ್ರಕರಣದಲ್ಲಿ ಬಾಲಕಿಯ ಅಪಹರಣವಾಗಿರಬಹುದೇ? ಇಲ್ಲದೇ ಬಾಲಕಿಯೇ ಯಾವುದಾದರೂ ಬೇರೆ ಕಾರಣದಿಂದ ಯಾರ ಜೊತೆಯಾದರೂ ಹೋಗಿರಬಹುದೇ ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂದಂತಿದ್ದು,ಪೊಲೀಸ್ ತನಿಖೆ ಬಳಿಕ ಸತ್ಯಾಂಶ ತಿಳಿದು ಬರಬೇಕಿದೆ.

RELATED ARTICLES  ದೀರ್ಘ ಆಯುಷ್ಯ ಬೇಕಾದರೆ ದಿನನಿತ್ಯ ವೇದ ಪಠಿಸಿ.