ಮುಂಬಯಿ : ಏಳು ದಿನಗಳ ನಿರಂತರ ಕುಸಿತವನ್ನು ಕಂಡಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 123 ಅಂಕಗಳ ಏರಿಕೆಯೊಂದಿಗೆ 31,216.36 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿದೆ.

ದೇಶೀಯ ಹೂಡಿಕೆದಾರರು, ಈಚಿನ ಕುಸಿತದಲ್ಲಿ ಅಗ್ಗದ ಧಾರಣೆಗೆ ಕುಸಿದಿದ್ದ ಬ್ಯಾಂಕಿಂಗ್‌, ಫಾರ್ಮಾ, ಮೆಟಲ್‌, ರಿಯಲ್ಟಿ ಶೇರುಗಳನ್ನು ಖರೀದಿಸಿದ ಕಾರಣ ಸೆನ್ಸೆಕ್ಸ್‌ ಮತ್ತು ನಿಫ್ಟಿ ಏರಿಕೆಯನ್ನು ಕಂಡು ಏಳು ದಿನಗಳ ನಿರಂತರ ಕುಸಿತಕ್ಕೆ ತಡೆ ಹಾಕಿದರು.

RELATED ARTICLES  ವಾರ್ತಾ ವಾಚಕ ರಂಗನಾಥ ಭಾರಧ್ವಾಜ ಆರೋಗ್ಯದಲ್ಲಿ‌ ಏರುಪೇರು: ಆಸ್ಪತ್ರೆ‌ಗೆ ದಾಖಲು.

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ 33.20 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 9,768.95 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಸೆನ್ಸೆಕ್ಸ್‌ ಕಳೆದ ಏಳು ದಿನಗಳ ಕುಸಿತದಲ್ಲಿ ಒಟ್ಟು 1,263.95 ಅಂಕಗಳನ್ನು ಕಳೆದುಕೊಂಡು ಬಡವಾಗಿತ್ತು.

RELATED ARTICLES  ನಾಗರಾಜ ನಾಯಕರ 'ಬೆಳಕಿನತ್ತ ಜನತೆಯ ಚಿತ್ತ'.

ಇಂದಿನ ವಹಿವಾಟಿನಲ್ಲಿ 1,547 ಶೇರುಗಳು ಮುನ್ನಡೆ ಸಾಧಿಸಿದರೆ 970 ಶೇರುಗಳು ಹಿನ್ನಡೆಗೆ ಗುರಿಯಾದವು. 164 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ