ಹೊನ್ನಾವರ: ಹೊನ್ನಾವರದ ಕರ್ಕಿ ರೈಲ್ವೆ ನಿಲ್ದಾಣದ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ದಾಳಿ ನಡೆಸಿ ಗಾಂಜಾ ಸಮೇತ ವಶಪಡಿಸಿಕೊಂಡಿರುವ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಈ ಆರೋಪಿತರು 530 ಗ್ರಾಂ. ತೂಕದ ಗಾಂಜಾ, ಇದರ ಮೌಲ್ಯ ಸರಿ ಸುಮಾರು ರೂ.15000 ಈ ಗಾಂಜಾವನ್ನು ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ.

RELATED ARTICLES  ಸಾರಾಯಿ ಎಂದು ತಿಳಿದು ವಿಷ ಕುಡಿದ ವ್ಯಕ್ತಿ.

ಈ ಆರೋಪಿತರು ಹೊನ್ನಾವರ ಲಕ್ಷ್ಮೀನಾರಾಯಣ ನಗರದ ನಾಗರಾಜ್ ಶಂಕರ ಆಚಾರ್ಯ ಮತ್ತು ಮುಂಬೈ ಮೂಲದ ಹಾಲಿ ಕಾಸರಗೋಡ್ ಟೊಂಕ ನಿವಾಸಿ ಸಮೀರ್ ದಾವೂದ್ ಶೇಖ ಎಂದು ಗುರುತಿಸಲಾಗಿದೆ.

RELATED ARTICLES  ಸದಾಶಿವಗಡದ ಐತಿಹಾಸಿಕ ಗುಡ್ಡಕ್ಕೆ ಬೆಂಕಿ..!

ಹೊನ್ನಾವರದ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣವು ದಾಖಲಾಗಿದೆ. ಈ ಕಾರ್ಯಾಚರಣೆಯನ್ನು ಸಿಸಿಐ ಶ್ರೀಧರ್ ಎಸ್. ಆರ್.ರವರ ಮಾರ್ಗದರ್ಶನದಲ್ಲಿ ಪಿ ಎಸೈ ಮಾಹಾಂತೇಶ್ ನಾಯಕ್ ರವರ ನೇತೃತ್ವದ ತಂಡದಿಂದ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.