ಕುಮಟಾ : ಗ್ರಾಮೀಣ ಪ್ರದೇಶದಲ್ಲಿನ ಮೂಲೆಮೂಲೆಗಳಲ್ಲಿನ ಪ್ರತಿ ಮನೆಗಳಿಗೂ ಉತ್ಕೃಷ್ಟ ವೈದ್ಯಕೀಯ ಸೇವೆ ಲಭಿಸಬೇಕು.ಕಡು ಬಡವರೂ ಸೂಕ್ತ ವೈದ್ಯಕೀಯ ಸೌಲಭ್ಯ ವನ್ನು ಅತಿ ಕಡಿಮೆ ದರದಲ್ಲಿ ಪಡೆದು ಎಲ್ಲರೂ ಆರೋಗ್ಯ ವಂತರಾಗಬೇಕು ಎಂಬುದು ನಿಟ್ಟೆ ವಿಶ್ವವಿದ್ಯಾಲಯದ ಅಧೀನ ಸಂಸ್ಥೆ ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್.ಹೆಗ್ಡೆ ಚೆರಿಟೇಬಲ್ ಆಸ್ಪತ್ರೆಯ ಕುಲಪತಿ ವಿನಯ ಹೆಗ್ಡೆ ಅವರ ಸದಿಚ್ಛೆಯಾಗಿದೆ ಎಂಬುದಾಗಿ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಙರಾಗಿರುವ ಹಿರಿಯ ವೈದ್ಯ ಡಾ.ಸನತ್ ಕುಮಾರ್ ಶೆಟ್ಟಿ ನುಡಿದರು. ಅವರು ಕುಮಟಾದ ವಿವೇಕನಗರ ವಿಕಾಸ ಸಂಘವು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿ.ಸಿ.ಟ್ರಸ್ಟ್ ರಿ.ಇವರ ಜಂಟಿ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸಂಘಟಕರ ಸೇವಾಕಾರ್ಯಗಳ ಪ್ರಯತ್ನದ ಫಲವಾಗಿ ಇಷ್ಟೊಂದು ಹೆಚ್ಚಿನ ಪ್ರಮಾಣದಲ್ಲಿ ಜನರು ತಮ್ಮ ಆರೋಗ್ಯ ತಪಾಸಣೆಗೆ ಬಂದಿರುವ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು.

RELATED ARTICLES  ಡಿ. ೬ ಹಾಗೂ ೭ ರಂದು ಪಾಲಿಟೆಕ್ನಿಕ್ ಸಿಬ್ಬಂದಿಗಳ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ.

ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಮಂತಕುಮಾರ್ ಶೆಟ್ಟಿಯವರು ಮಾತನಾಡಿ ಆಸ್ಪತ್ರೆಯು ನೀಡುತ್ತಿರುವ ವೈದ್ಯಕೀಯ ಸೇವಾ ಸೌಲಭ್ಯಗಳು,ಕ್ಷೇಮ ಹೆಲ್ತ್ ಕಾರ್ಡ್ ಮೂಲಕ ದೊರೆಯುವ ವಿಮಾ ಸೌಲಭ್ಯಗಳು ಮತ್ತು ಬಡ ರೋಗಿಗಳಿಗೆ ದೊರೆಯುವ ರಿಯಾಯತಿ ಕುರಿತು ವಿವರಿಸಿದರು.

ಶಿಬಿರದಲ್ಲಿ ಎಲುಬು ಮತ್ತು ಮೂಳೆ ತಜ್ಙ ಡಾ.ಸನತ್ ಕುಮಾರ್ ಶೆಟ್ಟಿ, ಶ್ವಾಸಕೋಶ ತಜ್ಙ ಡಾ.ಚಂದ್ರಮೌಳಿ ಎಮ್.ಟಿ.,ಶಸ್ತ್ರಚಿಕಿತ್ಸಾ ತಜ್ಙ ಡಾ.ಪ್ರಸಾದ ಶಂಕರ ಶೆಟ್ಟಿ,ವೈದ್ಯಕೀಯ ತಜ್ಙ ಡಾ.ರಾಮ್ ಮೋಹನ್ ಭಂಡಾರಿ ಉಪಸ್ಥಿತರಿದ್ದು ಎಲ್ಲ ಶಿಬಿರಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿಕೊಟ್ಟರು.

ಶಿಬಿರದಲ್ಲಿ ಈ.ಸಿ.ಜಿ.ತಪಾಸಣೆ,ಬಿ.ಪಿ. ಹಾಗೂ ರಕ್ತ ತಪಾಸಣಾ ವ್ಯವಸ್ಥೆ ಕಲ್ಪಿಸಲಾಗಿದ್ದು ಅತ್ಯವಶ್ಯವುಳ್ಳ ರೋಗಿಗಳು ಪ್ರಯೋಜನ ಪಡೆದರು.

ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಸ್ಥಳೀಯ ಹಿರಿಯರಾದ ರೋಹಿದಾಸ ನಾಯಕರವರು ಮಾತನಾಡಿ ದೇರಳೆಕಟ್ಟೆ ಆಸ್ಪತ್ರೆಯ ವೈದ್ಯಕೀಯ ಸೇವಾ ಕಾರ್ಯ ವೈಖರಿ ಕುರಿತು ಹಾಗೂ ವಿವೇಕನಗರ ವಿಕಾಸ ಸಂಘದ ಸಾಮಾಜಿಕ ಕಾಳಜಿ ಕುರಿತು ಶ್ಲಾಘಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ವಿವೇಕನಗರ ವಿಕಾಸ ಸಂಘದ ಅಧ್ಯಕ್ಷ ಡಾ.ಎಮ್.ಆರ್.ನಾಯಕ ಅವರು ಕಳೆದ ಆರು ವರ್ಷಗಳಿಂದ ಸಂಘವು ನಡೆಸಿಕೊಂಡು ಬರುತ್ತಿರುವ ಸಾಮಾಜಿಕ ಸೇವಾ ಕಾರ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ ಸರ್ವರ ಸಹಕಾರ ಸ್ಮರಿಸಿದರು.

RELATED ARTICLES  ಗಣರಾಜ್ಯೋತ್ಸವದಲ್ಲಿ ಎಲ್ಲ ಸರ್ಕಾರಿ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಕಡ್ಡಾಯವಾಗಿ ಹಾಜರಿರಬೇಕು: ಎಸ್.ಎಸ್.ನಕುಲ್

ವಿವೇಕನಗರ ವಿಕಾಸ ಸಂಘದ ಎಲ್ಲ ಪದಾಧಿಕಾರಿಗಳ ಸಂಘಟಿತ ಪ್ರಯತ್ನದ ಫಲವಾಗಿ ಶಿಬಿರದಲ್ಲಿ ವಿವೇಕನಗರದವರಷ್ಟೇ ಅಲ್ಲದೇ ಕುಮಟಾ ಹಾಗೂ ಸುತ್ತ ಮುತ್ತಲಿನ ಅಂತೂ 300 ರಷ್ಟು ಜನರು ಪಾಲ್ಗೊಂಡು ತಮ್ಮ ಆರೋಗ್ಯ ತಪಾಸಣೆಗೈಸಿಕೊಂಡು ತಜ್ಙ ವೈದ್ಯರಿಂದ ಸೂಕ್ತ ಸಲಹೆ ಪಡೆದರು.ಲಭ್ಯವಿದ್ದ ಔಷಧಗಳನ್ನೂ ಉಚಿತವಾಗಿ ಪಡೆದರು.

ಕುಮಾರಿ ಶಿಲ್ಪಾ ಡಿ.ಭಟ್ಟ ಪ್ರಾರ್ಥಿಸಿದರು.ಸಂಯೋಜಕ ಅರುಣ ಹೆಗಡೆ ಪ್ರಾಸ್ತಾವಿಕ ಮಾತನ್ನಾಡಿ ಸ್ವಾಗತಿಸಿದರು.ಉಪಾಧ್ಯಕ್ಷ ಎಸ್.ಆಯ್.ನಾಯ್ಕ ವಂದಿಸಿದರು.ನಿರ್ದೇಶಕ ಜಯದೇವ ಬಳಗಂಡಿ ನಿರೂಪಿಸಿದರು.