ಅಂಕೋಲಾ: ಬೃಹತ್ ಗಾತ್ರದ ಹೆಬ್ಬಾವೊಂದು ನವಿಲನ್ನು ನುಂಗಿ ಆತಂಕಾರಿ ಘಟನೆಯೊಂದು ಅಂಕೋಲಾ ತಾಲೂಕಿನ ಜಮಗೋಡ್ ನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಜಮಗೋಡ್ ನ ವಕೀಲರಾದ ಬೀರಣ್ಣ ನಾಯಕ ಎನ್ನುವವರ ಮನೆಯ ತೋಟದಲ್ಲಿ ನವಿಲೊಂದು ಮೊಟ್ಟೆ ಇಟ್ಟು
ಕುಳಿತಿತ್ತು. ಅದನ್ನ ಕಂಡಿದ್ದ ಸುಮಾರು 12 ಅಡಿ ಉದ್ದದ ಹೆಬ್ಬಾವೊಂದು, ನವಿಲನ್ನು ಬೇಟೆಯಾಡಿ ನುಂಗಿದೆ ಎನ್ನಲಾಗಿದೆ.

ಅಲ್ಲದೇ, ತೋಟದ ಪೊದೆಯಲ್ಲೇ ಅವಿತು ಕುಳಿತುಕೊಂಡು, ತೋಟದ ಕೆಲಸಗಾರರನ್ನು ಕಂಗಾಲಾಗಿಸಿತ್ತು. ತಕ್ಷಣವೇ ತೋಟದ ಮಾಲೀಕರಿಗೆ ಕೆಲಸಗಾರರು ಇದರ ಬಗ್ಗೆ ಮಾಹಿತಿ ನೀಡಿದ್ದು, ಮಾಲೀಕರು ವನ್ಯಜೀವಿ ರಕ್ಷಕ ಮಹೇಶ್ ನಾಯ್ಕ ಅವರನ್ನು ಸ್ಥಳಕ್ಕೆ ಕರೆಯಿಸಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES  ಬೈಕ್ ಡಿಕ್ಕಿ : ಓರ್ವ ಸಾವು

ಸ್ಥಳಕ್ಕೆ ಬಂದ ಮಹೇಶ್ ನಾಯ್ಕ, ಸುಮಾರು ಒಂದೂವರೆ ಗಂಟೆಗಳ ಕಾಲ ಕಾರ್ಯಾಚರಣೆ. ನಡೆಸಿ ಹೆಬ್ಬಾವನ್ನ ಸೆರೆ ಹಿಡಿದು ರಕ್ಷಣೆ ಮಾಡಿದ್ದಾರೆ. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸೇರಿ ಹೆಬ್ಬಾವನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ ಎಂದು ವರದಿಯಾಗಿದೆ.

RELATED ARTICLES  "ಎಳ್ಳು ಬೀರಿ, ಸಿಹಿ ಹಂಚುವ” ಈ ಮಕರ ಸಂಕ್ರಾಂತಿ ಹಬ್ಬದ ವಿಶೇಷತೆ ಏನು ಗೊತ್ತಾ…?