ಭಟ್ಕಳ : ಪ್ರಮುಖ ನಗರಗಳಲ್ಲಿ ಮಾತ್ರ ಪತ್ತೆಯಾಗುತ್ತಿದ್ದ ವೇಶ್ಯಾವಾಟಿಕೆ ಪ್ರಕರಣಗಳು ಇದೀಗ ಉತ್ತರ ಕನ್ನಡದಲ್ಲಿಯೂ ಪತ್ತೆಯಾಗುತ್ತಿದ್ದು, ಮುರ್ಡೇಶ್ವರದ ಶಿವಕೃಪ ಲಾಡ್ಜ್ ಮೇಲೆ ಪೊಲೀಸರ ದಾಳಿ ನಡೆಸಿ ವೇಷ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದ ಇಬ್ಬರು ಮಹಿಳೆಯರ ರಕ್ಷೆಣೆ ಮಾಡಿ ಇದರಲ್ಲಿ ತೊಡಗಿದ ವ್ಯಕ್ತಿಗಳನ್ನು ಬಂಧನ ಮಾಡಿದ್ದಾರೆ ಎಂದು ವರದಿಯಾಗಿದೆ.

ಬಂಧಿತ ಆರೋಪಿಗಳನ್ನು ನಾಗರಾಜ ಮತ್ತು ಮಯೂರ ಎಂದು ತಿಳಿದು ಬಂದಿದೆ. ಪರಾರಿಯಾದ ಆರೋಪಿ ಶಿವಪ್ರಸಾದ್ ಎಂದು ತಿಳಿದು ಬಂದಿದೆ. ಇವರು ತಮ್ಮ ಲಾಭಗೊಸ್ಕರ ನೊಂದ ಮಹಿಳೆಯರನ್ನು ಕರೆಸಿ ಮುರುಡೇಶ್ವರ ಶಿವಕೃಪ ಲಾಡ್ಜನಲ್ಲಿ ಇರಿಸಿ ಗಿರಾಕಿಗಳಿಂದ ಬಂದ ಹಣವನ್ನು ಪಡೆದುಕೊಂಡು ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ.

RELATED ARTICLES  "ಬರಬಾರದೆಂದರೆ ಆಪತ್ತು ತಿಳಿಯಿರಿ ಈ ಇಪ್ಪತ್ತು"

ರಕ್ಷೆಣೆ ಮಾಡಿದ ಮಹಿಳೆಯರಲ್ಲಿ ಓರ್ವ ಮಹಿಳೆ ಹಾಸನ, ಇನ್ನೂರ್ವ ಮಹಿಳೆ ಬೆಂಗಳೂರು ಮೂಲದವರಾಗಿದ್ದಾರೆ. ಭಟ್ಕಳ ಡಿ.ವೈ .ಎಸ್.ಪಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಮುರ್ಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ತಲೆಮೆರೆಸಿಕೊಂಡ ಆರೋಪಿಗಾಗಿ ಪತ್ತೆ ಕಾರ್ಯ ನಡೆಯುತ್ತಿದ್ದು ಆದಷ್ಟು ಶೀಘ್ರದಲ್ಲಿ ಆರೋಪಿಯನ್ನು ಬಂಧಿಸುವ ಭರವಸೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

RELATED ARTICLES  ಜನರ ಆಕ್ರೋಶದ ಬೆನ್ನಲ್ಲೇ ದೈವ ನರ್ತಕ ಎಸ್ಕೇಪ್..?