ಭಟ್ಕಳ : ಪಟ್ಟಣದ ಕಾಮಾಕ್ಷಿ ಪೆಟ್ರೋಲ್ ಬಂಕ್‌ನ ಮಾಲಿಕ, ಜನಾನುರಾಗಿ ಮೋಹನ ಪುರುಷೋತ್ತಮ ಭಟ್ಟ (82) ಸೆ. 17ರ ತಡರಾತ್ರಿ ನಿಧನರೆಂದು ತಿಳಿದುಬಂದಿದೆ. ಇವರು ಇಬ್ಬರು ಪುತ್ರರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೂಲತಃ ಹೊನ್ನಾವರ ಮಾವಿನಕುರ್ವಾದವರಾದ ಮೋಹನ ಭಟ್ಟರು ಹೊನ್ನಾವರದ ಮಾವಿನಕುರ್ವಾ ಶ್ರೀ ನವದುರ್ಗಾ ಸಂಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಬಹಳ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

RELATED ARTICLES  ಇಂದಿನ(ದಿ-20/02/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ

ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಪುಷ್ಪಲತಾ ಮಂಕಾಳ ವೈದ್ಯ, ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ ನಾಯಕ, ಟ್ರಸ್ಟಿ ಮೆನೇಜರ್ ರಾಜೇಶ ನಾಯಕ ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದರು. ಮೋಹನ ಭಟ್ಟ ಅವರು ಓರ್ವ ಸಮಾಜಮುಖಿ ವ್ಯಕ್ತಿಯಾಗಿದ್ದು ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಸಮಾಜ ಸೇವಕ ಸುರೇಂದ್ರ ಶ್ಯಾನಭಾಗ, ಮಾಜಿ ಶಾಸಕ ಮಂಕಾಳ ವೈದ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.

RELATED ARTICLES  ಯುವಕರಲ್ಲಿ ಸಾಮಾಜಿಕ ಕಳಕಳಿಯನ್ನು ತುಂಬುವ ಉದ್ದೇಶದಿಂದ ಎಬಿವಿಪಿ ಸ್ಥಾಪನೆ : ಹನುಮಂತ ಶಾನಭಾಗ