ಬನವಾಸಿ: ಭಾಷಣ ಹಾಗೂ‌ ಜಾತಿ ಧರ್ಮದ ರಾಜಕಾರಣ ಮಾಡಿದಲ್ಲಿ ಜನರ ಹೊಟ್ಟೆ ತುಂಬುವುದಿಲ್ಲ. ಬದುಕಾಗಿ ಜನರ ಸರ್ವತೋಮುಖ ಪ್ರಗತಿಗೆ ನಾವು ಶ್ರಮಪಡಬೇಕು ಎಂದು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಹೇಳಿದರು. ತಾಲೂಕಿನ ಬನವಾಸಿ ಭಾಗವ ವಿವಿಧ ಕಡೆಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿಯವರು ಯಾವುದನ್ನು ಮಾಡುವುದಿಲ್ಲವೋ ಅದನ್ನು ಹೇಳಿಕೊಂಡು ಓಡಾಡುತ್ತಾರೆ. ಕೇವಲ ಭಾಷಣ ಮಾಡುತ್ತಾ ಕಾಲ‌ ಕಳೆಯುತ್ತಾರೆ. ಆದರೆ ನಾವು ಅಭಿವೃದ್ಧಿಯನ್ನು ಮಾಡುತ್ತೇವೆ.‌ಅದರಲ್ಲಿ ಯಾವುದೇ ಕೊರತೆ ಮಾಡಿಲ್ಲ. ಆದರೆ ನಮ್ಮ ಅಭಿವೃದ್ಧಿ ಕೆಲಸಗಳು ಪ್ರಚಾರ ಪಡೆದುಕೊಂಡಿಲ್ಲವಷ್ಟೆ. ಅದನ್ನು ಕಾರ್ಯಕರ್ತರು ಮಾಡಬೇಕಿದೆ ಎಂದರು.

ಮುಖ್ಯಮಂತ್ರಿ ಗಳಿಂದ ಸಾಧ್ಯವಾದಷ್ಟು ಅಭಿವೃದ್ಧಿ ಕೆಲಸಗಳನ್ನು, ಯೋಜನೆಗಳನ್ನು ತಂದಿದ್ದೇವೆ.‌ ರಸ್ತೆ ಕಾಮಗಾರಿ, ನೀರಾವರಿ, ಶಿಕ್ಷಣ, ವಿದ್ಯುತ್ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಮಾಡಲಾಗಿದೆ. ರೈತರ ಸಮಸ್ಯೆಗಳನ್ನು ಮನಗಂಡು ಸಾಲಮನ್ನಾ ಮಾಡಿದ್ದೇವೆ. ಆದರೆ ಬರೇ ಬಾಯಿ ಮಾತಲ್ಲಿ ಅಭಿವೃದ್ಧಿ ಹೇಳುವ ಬಿಜೆಪಿಯವರು ಮಾತ್ರ ರಾಷ್ಟ್ರೀಕೃತ ಬ್ಯಾಂಕ್ ನ ಸಾಲಮನ್ನಾ ಮಾಡುವತ್ತ ವಿಚಾರ ಮಾಡಿಲ್ಲ. ೪೦ ಲಕ್ಷ ರೈತರ ಸಾಲ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿದೆ. ನಾವು ಮಾಡಿದಂತೆ ಅವರೂ ಸಹ ರೂ.೫೦ ಸಾವಿರ ಸಾಲಮನ್ನಾ ಮಾಡಿ ರೈತರಿಗೆ ಸಹಾಯ ಮಾಡಲಿ ಎಂದು ಆಗ್ರಹಿಸಿದರು. ಯುಪಿಎ ಅಧಿಕಾರದಲ್ಲಿದ್ದಾಗ ಕಚ್ಚಾತೈಲದ ಬೆಲೆ ೧೪೧ ಡಾಲರ್ ಇದ್ದರೂ ರೂ.೭೮ ಕ್ಕಿಂತ ಅಧಿಕ ದರ ಒಂದು ಲೀಟರ್ ಪೆಟ್ರೋಲ್ ಗೆ ಏರಿರಲಿಲ್ಲ. ಆದರೆ ಇಂದು ಕಚ್ಚಾತೈಲ್ ಬೆಲೆ ಕೇವಲ ೪೪ ಡಾಲರ್ ಇದ್ದರೂ ಅಧಿಕ ದರವಿದೆ. ಇಂದಿನ ಕಚ್ಚಾತೈಲದ ಬೆಲೆಯಂತೆ ರೂ.೩೦ ರಷ್ಟಕ್ಕೆ ಪೆಟ್ರೋಲ್ ನೀಡಲು ಸಾಧ್ಯವಿತ್ತು. ಆದರೆ ಜನರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

RELATED ARTICLES  ರೋಟರಾಕ್ಟ್ ಕ್ಲಬ್ ನಿಂದ ಫ್ರಂಟ್ ಲೈನ್ ವಾರಿಯರ್ಸ್ ಗೆ ಕಲ್ಲಂಗಡಿ ಹಣ್ಣು ವಿತರಣೆ

ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಜಿ.ಪಂ.ಸದಸ್ಯರಾದ ಬಸವರಾಜ ದೊಡ್ಮನಿ, ರೂಪಾ ನಾಯ್ಕ, ಸುಗಾವಿ ಪಂಚಾಯತ ಅಧ್ಯಕ್ಷೆ ಸವಿತಾ ಚನ್ನಯ್ಯ, ಕೆಪಿಸಿಸಿ ಕಾರ್ಯದರ್ಶಿ ಸಿ.ಎಫ್.ನಾಯ್ಕ, ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದ್ಯಾಮಣ್ಣ ದೊಡ್ಮನಿ, ತಾ.ಪಂ.ಸದಸ್ಯ ಸುರೇಶ ನಾಯ್ಕ, ಸುಗಾವಿ ಪಂಚಾಯತ ಉಪಾಧ್ಯಕ್ಷ ರಾಜೇಂದ್ರ ಭಟ್ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಆತ್ಮಹತ್ಯೆಗೆ ಶರಣಾದ ವ್ಯಕ್ತಿ : ಕುಟುಂಬದ ಆಕೃಂದನ.