ಭಟ್ಕಳ: ದಲಿತ ಹೋರಾಟಗಾರ ನಾರಾಯಣ ವೆಂಕಪ್ಪ ಶಿರೂರು (75) ಇಂದು ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಜಿಲ್ಲೆಯಲ್ಲಿ ಹಾಗೂ ತಾಲೂಕಿನಲ್ಲಿ ದಲಿತರ ಪರವಾಗಿ ಹೋರಾಟ ನಡೆಸುತ್ತಿದ್ದ ಇವರು ದಲಿತರ ಉದ್ಧಾರಕ್ಕಾಗಿ ಸದಾ ಚಿಂತನೆ ನಡೆಸುತ್ತಾ ಬಂದಿದ್ದಿ ಅಪ್ರತಿಮ ಹೋರಾಟಗಾರರಾಗಿದ್ದರು.

RELATED ARTICLES  ಸಾರ್ಥ ಪ್ರತಿಷ್ಠಾನ ಕುಮಟಾದ ದಶಮಾನೋತ್ಸವ ಕಾರ್ಯಕ್ರಮ.

ಅನೇಕ ಸಂದರ್ಭದಲ್ಲಿ ದಲಿತರಿಗೆ ಅನ್ಯಾಯವಾದಾಗ ತನ್ನ ಆರೋಗ್ಯವನ್ನು ಲೆಕ್ಕಿಸದೇ ಉಪವಾಸ ಸತ್ಯಾಗೃಹ ಕೈಗೊಂಡು ದಲಿತರಿಗೆ ಬೆಂಬಲವಾಗಿ ನಿಂತಿದ್ದರು. ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಇವರನ್ನು ಮಣಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಶಾಸಕ ಸುನೀಲ್ ನಾಯ್ಕ, ಮಾಜಿ ಶಾಸಕ ಜೆ.ಡಿ.ನಾಯ್ಕ, ಡಿ.ಎಸ್.ಪಿ. ಕೆ.ಯು ಬೆಳ್ಳಿಯಪ್ಪ ಸೇರಿದಂತೆ ಜಿಲ್ಲೆಯ ಹಾಗೂ ತಾಲೂಕಿನ ಅನೇಕ ದಲಿತ ಮುಖಂಡರು ಇವರ ಮೃತದೇಹದ ಅಂತಿಮ ದರ್ಶನ ಪಡೆದರು.

RELATED ARTICLES  ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಶ್ರಮಿಸಬೇಕು.