ಕಾರವಾರ : ಮೀನುಗಾರಿಕೆಗೆ ತೆರಳಿದ ವೇಳೆ ನಡೆದ ದುರ್ಘಟನೆಯ ಕಾರಣದಿಂದಾಗಿ ಮೀನುಗಾರರು ಅಪಾಯಕ್ಕೆ ಸಿಲಿಕಿದ ಹಾಗೂ ಮೀನು ಸಮುದ್ರಪಾಲಾದ ಘಟನೆಯೊಂದು ನಡೆದಿದೆ. ಕಾರವಾರ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿದ್ದು, 30 ಟನ್ ನಷ್ಟು ಮೀನು ಸಮುದ್ರ ಪಾಲಾದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

RELATED ARTICLES  ಗೋಲ್ ಇಂಟರ್ನ್ಯಾಶನಲ್ ಪಬ್ಲಿಕ್ ಶಾಲೆಗೆ ಎಕ್ಸಲೆನ್ಸ್ ಇನ್ ಅಕಾಡಮಿಕ್ಸ್ ಅವಾರ್ಡ್.

ಸಮುದ್ರದಲ್ಲಿ ಬೈತಖೋಲ್ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ವಾಮನ್ ಹರಿಕಂತ್ರ ಎನ್ನುವವರ ಮಾಲಿಕತ್ವದ ಬೋಟ್ ನಲ್ಲಿ ರಂಧ್ರ ಉಂಟಾಗಿ ನೀರು ತುಂಬಿದೆ. ಇದರಿಂದಾಗಿ ಬೋಟ್ ಮುಳುಗಲು ಪ್ರಾರಂಭಿಸಿತ್ತು. ಈ ಬೋಟ್‌ನಲ್ಲಿ 30 ಸುಮಾರು ಮೀನುಗಾರರಿದ್ದು, ಸಮೀಪದಲ್ಲಿದ್ದ ಮತ್ತೊಂದು ಬೋಟಿನ ಸಹಾಯದಿಂದ ಮೀನುಗಾರರನ್ನ ರಕ್ಷಣೆ ಮಾಡಲಾಗಿದೆ ಎನ್ನಲಾಗಿದೆ.

RELATED ARTICLES  ಅಕ್ಟೋಬರ್ 20 ರಿಂದ ನವೆಂಬರ್ 03 ರ ವರೆಗೆ ಕುಮಟಾದ ಉದಯ ಬಜಾರದಲ್ಲಿ “DEEPAVALI DELIGHTS SALE” :ಗ್ರಾಹಕರಿಗಾಗಿ ಕೊಡುಗೆಗಳ ಮಹಾಪೂರ.

30 ಟನ್ ಮೀನುಗಳನ್ನು ಹಿಡಿದು ತರುವಾಗ ಈ ಘಟನೆ ಸಂಭವಿಸಿದ್ದು, ಭಾರವಾದ ಕಾರಣ ಬೋಟಿನಲ್ಲಿದ್ದ ಮೀನನ್ನು ಸಮುದ್ರಕ್ಕೆ ಎಸೆದು ನಂತರ ಬೋಟನ್‌ನ ಬೈತಖೋಲ್ ಬಂದರಿಗೆ ಎಳೆದು ತರಲಾಗಿದೆ. ಆದರೆ ಬಂದರಿನಲ್ಲಿ ನಿಲ್ಲಿಸಿಟ್ಟ ಬಳಿಕವೂ ಬೋಟ್ ಮುಳುಗಿದ್ದು, ಸುಮಾರು 50 ಲಕ್ಷ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.