ಪೊಲೀಸ್ ಇಲಾಖೆಯು ಜಿಲ್ಲಾ ಮತ್ತು ನಗರ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, 3484 ಹುದ್ದೆಗೆ ಅರ್ಜಿ ಸಲ್ಲಿಸಲು ಇದೀಗ ಆನ್‌ಲೈನ್‌ ಲಿಂಕ್ ಬಿಡುಗಡೆ ಮಾಡಿದೆ.

ಕರ್ನಾಟಕ ಪೊಲೀಸ್ ಇಲಾಖೆಯು 3484 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಇಂದಿನಿಂದ (ಸೆಪ್ಟೆಂಬರ್ 19, 2022) ಅರ್ಜಿ ಸ್ವೀಕಾರ ಆರಂಭವಾಗಿದೆ. ಅಕ್ಟೋಬರ್ 31, 2022 ರವರೆಗೆ 43 ದಿನಗಳ ಕಾಲ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಕರ್ನಾಟಕ ರಾಜ್ಯದ ಎಸ್‌ಎಸ್‌ಎಲ್‌ಸಿ ಪಾಸಾಗಿರುವ ನಿರುದ್ಯೋಗಿ ಯುವಕರು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಬೇಕು ಎಂದುಕೊಂಡಿದ್ದರೆ, ಇಂದಿನಿಂದಲೇ ಅರ್ಜಿ ಸಲ್ಲಿಸಿ. ಈ ಹುದ್ದೆಗಳಿಗೆ ಆಯ್ಕೆಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ, ದೈಹಿಕ ಸಹಿಷ್ಣುತೆ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆಗಳು ಇರುತ್ತವೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಹೆಸರು, ವಿಳಾಸ, ವಿದ್ಯಾರ್ಹತೆ, ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ, ಸಹಿ ಸ್ಕ್ಯಾನ್ ಕಾಪಿ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಮೀಸಲಾತಿ ವಿವರಗಳು ಅಗತ್ಯ. ಈ ಮಾಹಿತಿಗಳನ್ನು ರೆಡಿ ಮಾಡಿಕೊಂಡು ನಂತರ ಅರ್ಜಿ ಸಲ್ಲಿಸಲು ಮುಂದಾಗಿ.

RELATED ARTICLES  ಸಾಗರದಲ್ಲಿ ರಾಮಪದ ಕಾರ್ಯಕ್ರಮ.

3484 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗೆ ಅರ್ಜಿ ಸಲ್ಲಿಕೆ ವಿಧಾನದ ಕುರಿತು ಈ ಕೆಳಗಿನಂತೆ ಮಾಹಿತಿ ನೀಡಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?

  • ಪೊಲೀಸ್ ಇಲಾಖೆ ವೆಬ್‌ಸೈಟ್‌ https://ksp-recruitment.in/ ಗೆ ಭೇಟಿ ನೀಡಿ.
  • ನಾನ್‌ ಕಲ್ಯಾಣ ಕರ್ನಾಟಕ / ಕಲ್ಯಾಣ ಕರ್ನಾಟಕ ಹುದ್ದೆ ಅರ್ಜಿಗೆ ಪ್ರತ್ಯೇಕ ಲಿಂಕ್ ನೀಡಲಾಗಿರುತ್ತದೆ.
  • ಅಭ್ಯರ್ಥಿ ತಾನು ಬಯಸಿದ ವೃಂದದ ಹುದ್ದೆ ಮುಂದೆ ‘Apply Now’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ನಂತರ ಕೆಎಸ್‌ಪಿಯ ಮತ್ತೊಂದು ಪೇಜ್‌ ಓಪನ್ ಆಗುತ್ತದೆ. ಇಲ್ಲಿಯೂ ‘Apply Now’ ಲಿಂಕ್ ಕ್ಲಿಕ್ ಮಾಡಿ.
  • ನಂತರ ಸೂಚನೆಗಳನ್ನು ಓದಿಕೊಂಡು, ಅಗತ್ಯ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.
  • ಭಾವಚಿತ್ರ / ಸಹಿ ಸ್ಕ್ಯಾನ್‌ ಕಾಪಿಗಳನ್ನು ಅಪ್‌ಲೋಡ್ ಮಾಡಬೇಕಿರುತ್ತದೆ.
  • ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬಹುದು.
  • ಅರ್ಜಿ ಪೂರ್ಣಗೊಳಿಸಿದ ನಂತರ ಮುಂದಿನ ರೆಫರೆನ್ಸ್‌ಗಾಗಿ ಆಯ್ಕೆ ಪ್ರಕ್ರಿಯೆ ಮುಗಿಯುವವರೆಗೆ ಬೇಕಾದ ಕಾರಣ ಪ್ರಿಂಟ್‌ ತೆಗೆದುಕೊಳ್ಳಿ.

ಅಪ್ಲಿಕೇಶನ್ ಶುಲ್ಕ ಎಷ್ಟು?
ಸಾಮಾನ್ಯ ಅರ್ಹತೆ, ಇತರೆ ಹಿಂದುಳಿದ ವರ್ಗಗಳಿಗೆ ರೂ.400.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.200.

484 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ ನೇಮಕ: ಅರ್ಜಿಗೆ ಬೇಕಾದ ದಾಖಲೆ, ಮಾಹಿತಿಗಳ ಲಿಸ್ಟ್‌ ಇಲ್ಲಿದೆ.. ಸಿದ್ಧತೆ ಮಾಡಿಕೊಳ್ಳಿ

RELATED ARTICLES  ಇಂಟಲಿಜೆಂಟ್ ಕಮ್ಯೂನಿಕೇಷನ್ ಸಿಸ್ಟಮ್ ಇಂಡಿಯಾ ಲಿಮಿಟೆಡ್ (ಐಸಿಎಸ್’ಐಎಲ್) ಮಾಹಿತಿ ತಂತ್ರಜ್ಞಾನ ಸಹಾಯಕ ಹುದ್ದೆಗಳಿಗೆ ನೇಮಕಾತಿ.

ಹುದ್ದೆಗಳ ವಿವರ
ಉಳಿಕೆ ಮೂಲ ವೃಂದದ ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌: 3064

ಕಲ್ಯಾಣ ಕರ್ನಾಟಕ ವೃಂದದ ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ : 420
ಒಟ್ಟು ಹುದ್ದೆಗಳ ಸಂಖ್ಯೆ: 3484

ಅರ್ಜಿಗೆ / ಶುಲ್ಕ ಪಾವತಿಗೆ ಕುರಿತ ದಿನಾಂಕಗಳು

ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 19-09-2022 ರ ಬೆಳಿಗ್ಗೆ 10-00 ಗಂಟೆಯಿಂದ.
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 31-10-2022 ರ ಸಂಜೆ 06 ಗಂಟೆವರೆಗೆ.
ಆನ್‌ಲೈನ್‌ನಲ್ಲಿ / ಬ್ಯಾಂಕ್‌ ಶಾಖೆಗಳಲ್ಲಿ / ಅಂಚೆ ಕಚೇರಿಗಳ ಮೂಲಕ ಶುಲ್ಕ ಪಾವತಿಗೆ ಕೊನೆ ದಿನಾಂಕ: 03-11-2022

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ದಿನಾಂಕ 31-10-2022 ಕ್ಕೆ ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು. ಗರಿಷ್ಠ 25 ವರ್ಷ ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿದ್ದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 27 ವರ್ಷ, ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ವರೆಗೆ ಅರ್ಜಿಗೆ ಅವಕಾಶ ಇರುತ್ತದೆ.