ಶಿರಸಿ: ಉತ್ತರ ಕನ್ನಡದಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದು, ಮನೆಯಲ್ಲಿ ಪೋಷಕರು ಬುದ್ದಿವಾದ ಹೇಳುವುದನ್ನು ಬೇರೆ ರೀತಿಯಾಗಿ ಕಲ್ಪಿಸಿಕೊಂಡು ತಮ್ಮ ಜೀವಕ್ಕೆ ಹಾನಿ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ತುಂಬಾ ಆಘಾತಕಾರಿ ವಿಷಯವಾಗಿದೆ. ಹಿಂದು ಅಂತಹುದೇ ಒಂದು ಪ್ರಕರಣ ಒಂದು ಮತ್ತೆ ಬೆಳಕಿಗೆ ಬಂದಿದೆ. ಶಾಲೆಯ ಬಾವಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಪ್ರೊಗ್ರೆಸ್ಸಿವ್ ಪ್ರೌಢಶಾಲೆಯಲ್ಲಿ ನಡೆದಿದೆ.

RELATED ARTICLES  ಕಳ್ಳತನವಾದ ಸ್ಮಾರ್ಟ್ ಫೋನಿನಿಂದ ದಾಖಲೆಗಳನ್ನು ಅಳಿಸುವುದು ಹೇಗೆ?

ಸಾಗರ ಮೂಲದ 9 ನೇ ತರಗತಿ ವಿದ್ಯಾರ್ಥಿ ಆಯನ್ ಬಾಬು ಶೇಖ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಮನೆಯಲ್ಲಿ ಪೋಷಕರು ಬಯ್ದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ನಿಖರವಾದ ಕಾರಣ ತಿಳಿದುಬರಬೇಕಿದೆ. ಬಾವಿಯಿಂದ ಶವವನ್ನು ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳೀಯ ಜನರ ಸಹಾಯದಿಂದ ಮೇಲೆತ್ತಿದ್ದು, ಶಿರಸಿ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಪೊಲೀಸರು ಮುಂದಿನ ಪ್ರಕ್ರಿಯೆ ಕೈಗೊಂಡಿದ್ದು, ತನಿಖೆ ನಂತರದಲ್ಲಿ ಪೂರ್ಣ ಮಾಹಿತಿ ಹೊರ ಬರಬೇಕಿದೆ.

RELATED ARTICLES  ಬ್ರಿಜ್ ನಿಂದ ಕೆಳಕ್ಕೆ ಬಿದ್ದ ಲಾರಿ : ಕ್ಲೀನರ್ ಗಂಭೀರ