ಭಟ್ಕಳ: ಕಳೆದ ಸೆ. 17ರಂದು ಸೌದೆ ಸಂಗ್ರಹಿಸಲು ಮನೆಯಿಂದ ಹೊರಟ ಮಹಿಳೆಯೋರ್ವರು
ಮನೆಗೆ ಹಿಂದಿರುಗದೇ ನಾಪತ್ತೆಯಾಗಿರುವ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ. ಕಾಣೆಯಾದ ಮಹಿಳೆಯನ್ನು ಮುರುಡೇಶ್ವರ ನಿವಾಸಿ ಮಾದೇವಿ ಸುಕ್ರಯ್ಯ ದೇವಡಿಗ (57) ಎಂದು ಗುರುತಿಸಲಾಗಿದೆ.

RELATED ARTICLES  ಬಸ್ ಮತ್ತು ಬೈಕ್ ಅಪಘಾತ -ಬೈಕ್ ಸವಾರ ಗಂಭೀರ.

ಮನೆಯಿ೦ದ ಹೋಗುವಾಗ ಮಹಿಳೆಯು ಹಳದಿ ಬಣ್ಣದ ಸೀರೆ, ಕೇಸರಿ ಬಣ್ಣದ ರವಿಕೆ, ಹಳದಿ ಬಣ್ಣದ ಚಪ್ಪಲಿ, ಕೊರಳಲ್ಲಿ ಕರಿಮಣಿ ಸರ, ಕಿವಿಯಲ್ಲಿ ಕಿವಿಯೋಲೆ, ಹಣೆಯಲ್ಲಿ ಕುಂಕುಮ ಧರಿಸಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಕಾಣೆಯಾದ ಮಹಿಳೆಯ ಮಗ ದಿನೇಶ ಸುಕ್ರಯ್ಯ ದೇವಡಿಗ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಮುಂದುವರೆದಿದೆ.

RELATED ARTICLES  ಶ್ರೀಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಆವಾರದಲ್ಲಿರುವ ಶ್ರೀ ದತ್ತಾತ್ರೇಯ ಗುರುದೇವರಿಗೆ ವಿಶೇಷ ಪೂಜೆ