ಸಿದ್ದಾಪುರ: ಸಿದ್ದಾಪುರ ತಾಲೂಕಿನ ಹಿರಿಯ ಯಕ್ಷಗಾನ ಕಲಾವಿದ ಕಮಲಾಕರ ಹೆಗಡೆ ಹುಕ್ಲಮಕ್ಕಿ ಯಕ್ಷಗಾನ ಅಕಾಡೆಮಿ ನೀಡುವ ಕರ್ಕಿ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಅವರನ್ನು ತಾಲೂಕು ಕಸಾಪದವರು ಅವರ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಿದರು ಎಂದು ತಿಳಿದುಬಂದಿದೆ.

ಸಾಹಿತ್ಯ ಪರಿಷತ್ ಎನ್ನುವ ಶೀರ್ಷಿಕೆ ಅಡಿಯಲ್ಲಿ ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಶಿರಳಗಿ ಹಾಗೂ ಸದಸ್ಯೆ ಸುಜಾತಾ ಹೆಗಡೆ ದಂಟಕಲ್ ಅವರು ಕಮಲಾಕರ ಮಂಜುನಾಥ ಹೆಗಡೆ ಹುಕ್ಲಮಕ್ಕಿ ಹಾಗೂ ಅವರ ಪತ್ನಿ ಸುಮಿತ್ರಾ ಹೆಗಡೆ ಅವರನ್ನು ಸನ್ಮಾನಿಸಿದರು ಎನ್ನಲಾಗಿದೆ.

RELATED ARTICLES  ಕಲರ್ ಝೆರಾಕ್ಸ್ ಮಾಡಿ ನೋಟು ಚಲಾವಣೆ ಮಾಡಿದ ಕಿಡಿಗೇಡಿಗಳು: ಕಾರವಾರದ ಕೆಲವರಿಗೆ ಕಹಿ ಅನುಭವ

ಯಕ್ಷಗಾನ ಭಾಗವತ ಸತೀಶ ಹೆಗಡೆ ದಂಟಕಲ್, ಹಾರ್ಸಿಕಟ್ಟಾ ಗ್ರಾಪಂ ಮಾಜಿ ಉಪಾಧ್ಯಕ್ಷ ಅಶೋಕ ಹೆಗಡೆ ಹಿರೇಕೈ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ, ಪರಮೇಶ್ವರ ಹೆಗಡೆ ಕಂಚನಳ್ಳಿ, ಕುಸುಮಾಕ್ಷಿ ಹೆಗಡೆ ಹುಕ್ಲಮಕ್ಕಿ ಶಶಿಧರ ಹೆಗಡೆ ಹುಕ್ಲಮಕ್ಕಿ, ವಿನುತಾ ಹೆಗಡೆ ಮುಂತಾದವರು ಇದ್ದರು ಎಂದು ವರದಿಯಾಗಿದೆ.

RELATED ARTICLES  ಶಿರಸಿ : ಅತ್ಯಾಚಾರ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಪ್ರಕಟಿಸಿದ ಕೋರ್ಟ..!