ಶಿರಸಿ : ಮನೆಯ ಅಂಗಳದಲ್ಲಿ ಶ್ವಾನದೊಂದಿಗೆ
ಆಟವಾಡುತ್ತಿದ್ದ ಎರಡುವರೆ ವರ್ಷದ ಮಗುವೊಂದು
ದನಗಳಿಗೆ ನೀಡುವ ಅಕ್ಕಿಧೂಳಿನ ಬಿಸಿ ಪಾತ್ರೆಗೆ ಬಿದ್ದು
ಸಾವು ಕಂಡ ಘಟನೆ ಸೋಂದಾ ಗ್ರಾಮದ ನರ್ಸಗಲ್
ಬಳಿ ನಡೆದಿದೆ. ರೇಷ್ಮಾ ಮಂಜುನಾಥ ಮರಾಠಿ ಎಂಬ ಮಗುವೇ ಸಾವು ಕಂಡ ದುರ್ದೈವಿಯಾಗಿದ್ದಾಳೆ.

RELATED ARTICLES  ಸರ್ಕಾರ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದೆ : ದಿನಕರ ಶೆಟ್ಟಿ

ಈಕೆ ನಾಯಿಯೊಂದಿಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕ ವಾಗಿ ದನಗಳ ಮೇವಿಗಾಗಿ ಕಾಯಿಸಿಟ್ಟಿದ್ದ ಪಾತ್ರೆಯಲ್ಲಿ ಬಿದ್ದು ಸಂಪೂರ್ಣವಾಗಿ ಸುಟ್ಟುಕೊಂಡು ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವು ಕಂಡಿದ್ದಾಳೆ.ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಬೈಕ್ ಗೆ ಹಿಂಬದಿಯಿಂದ ಬಡಿದು ಸವಾರನ ಕಾಲಿನ ಮೇಲೆ ಹರಿದ ಟ್ರಕ್..!

ಮಗುವನ್ನ ಕಳೆದುಕೊಂಡ ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸುತ್ತಮುತ್ತಲ ನೂರಾರು ಜನ ಜಮಾಹಿಸಿದ್ದರು. ಪರಿಸ್ಥಿತಿ ಆಗಲೇ ಕೈಮೀರಿತ್ತು. ಮಗುವನ್ನು ಕಳೆದುಕೊಂಡ ತಂದೆ ತಾಯಿಯರ ಗೋಳು ಎಂತವರ ಮನವನ್ನೂ ಕಲಕುವಂತಿತ್ತು.