ಭಟ್ಕಳ: ಜಗತ್ತಿನಲ್ಲಿ ಸಂಭವಿಸಿರುವ ಸೆಲ್ಫೀ ಸಾವುಗಳಲ್ಲಿ ಶೇ.50 ರಷ್ಟು ಸಾವುಗಳು ಭಾರತದಲ್ಲಿ ಸಂಭವಿಸಿದ್ದು, ಇಂದಿನ ಯುವಜನಾಂಗವು ಸೆಲ್ಫಿ ಗೀಳಿಗೆ ಬಲಿಯಾಗುತ್ತಿರುವುದರ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಲು ಭಟ್ಕಳದ ಶ್ರೀ ಗುರು ಸುಧೀಂದ್ರ ಬಿಸಿಎ ಹಾಗೂ ಬಿಬಿಎ ಕಾಲೇಜು ವಿದ್ಯಾರ್ಥಿಗಳು ಉಪನ್ಯಾಸಕರನ್ನೊಳಗೊಂಡು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದಿನದ 24 ಘಂಟೆಯು ಯುವ ಪೀಳಿಗೆಯು ಸೆಲ್ಫಿ ಬಗ್ಗೆ ಜಾಗೃತರಾಗಿರಲು 24 ಅಡಿಗಳ ಪರಿಸರ ಸ್ನೇಹಿ ಬ್ಯಾನರನ್ನು ರಚಿಸಿ, ಸಹಿ ಸಂಗ್ರಹಣೆಯೊಂದಿಗೆ ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸಲಾಯಿತು.
ಬ್ಯಾನರ ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲ ನಾಗೇಶ ಭಟ್ಟ, ಸೆಲ್ಫೀಯಿಂದ ಆಗುವ ಅನಾಹುತಗಳು, ಸಾವು ನೋವುಗಳು ಹಾಗೂ ನಾವು ತೆಗೆದುಕೊಳ್ಳಬೇಕಾದ ಸುರಕ್ಷಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸೆಲ್ಫಿ ಕಿಲ್ಫೀ ಯಾಗದಿರಲಿ ಎನ್ನುವ ಆಶಯವನ್ನು ವ್ಯಕ್ತಪಡಿಸಿದರು.