ಕುಮಟಾ: ಉತ್ತರಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸರ್ಕರದ ತಾತ್ವಿಕ ಒಪ್ಪಿಗೆ ಬೆನ್ನಲ್ಲೇ ಇದಕ್ಕೆ ಸಂಬಂಧಿಸಿದ ಪೂರ್ವಭಾವಿ ಚಟುವಟಿಕೆಗಳು ಆರಂಭವಾಗಿದೆ. ಜಿಲ್ಲೆಯ ಕುಮಟಾ ತಾಲೂಕಿನ ವಿವಿಧೆಡೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಮಂಗಳೂರಿನ ಕೆಎಸ್ ಹೆಗಡೆ ಆಸ್ಪತ್ರೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಅಂಗವಾಗಿ ಕುಮಟಾ ತಾಲೂಕಿನ ಊರಕೇರಿ ಗ್ರಾಮಕ್ಕೆ ಆಗಮಿಸಿದ್ದ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಾದ ಮುಲ್ಲಘ ಮುಗಿಲನ್ ಅವರು ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕುಮಟಾದಲ್ಲಿ ಗುರುತಿಸಲಾದ ಪ್ರದೇಶಗಳಿಗೆ ಅಧಿಕಾರಿಗಳ ತಂಡದೊಂದಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕುಮಟಾ ತಾಲೂಕಿನ ಮಿರ್ಜಾನ ರೈಲ್ವೆ ನಿಲ್ಧಾಣ ಸಮೀಪದ ಪ್ರದೇಶ, ಅಂತ್ರವಳ್ಳಿಯ ಶಿಳ್ಳೆಯ ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರದೇಶ, ಕುಮಟಾ ರೈಲ್ವೆ ನಿಲ್ಧಾಣಕ್ಕೆ ತೆರಳುವ ರಸ್ತೆಯ ಸಮೀಪದ ಪ್ರದೇಶ ಹಾಗೂ ಪಟ್ಟಣದ ಕೊಂಕಣ ಎಜ್ಯುಕೇಶನ್ ಸಂಸ್ಥೆಯ ಸಮೀಪದಲ್ಲಿರುವ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ (ವಿವರಣೆ ತಿಳಿಯಲು ಸುದ್ದಿಯನ್ನು ಕ್ಲಿಕ್ಕಿಸಿ) ಉತ್ತರ ಕನ್ನಡದ ಜನರ ಕನಸು ನನಸು..! ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಆರೋಗ್ಯ ಸಚಿವರ ಮಾಹಿತಿ. : ಉತ್ತರಕನ್ನಡದ ಸಂಸದರು, ಸಚಿವರು, ಶಾಸಕರ ಜೊತೆ ಸಭೆ
ಈ ಹಿಂದೆಯೂ ಸಹ ಜಿಲ್ಲಾಧಿಕಾರಿಗಳು ಅಧಿಕಾರಿಗಳೊಡನೆ ತೆರಳಿ ಈ ಎಲ್ಲಾ ಪ್ರದೇಶಗಳ ಪರಿಶೀಲನೆ ನಡೆಸಿದ್ದರು. ಅಂತೆಯೇ ಇದೀಗ ಪುನಃ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅತ್ತ ಬೆಂಗಳೂರಿನಲ್ಲಿ ಸಚಿವ ಸುಧಾಕರ್ ನೇತೃತ್ವದಲ್ಲಿ ಸಭೆ ನಡೆದ ಬೆನ್ನಲ್ಲೆ, ಜಿಲ್ಲಾಧಿಕಾರಿಗಳು ದಿಢೀರ್ ಆಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಜಾಗ ಪರಿಶೀಲನೆ ಮಾಡಿದ್ದಾರೆ.
ಈ ಸುದ್ದಿ ಓದಿ – ಶಾಲೆಯ ಬಾವಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ : ಪಾಲಕರ ಕಳಕಳಿಯ ಮಾತೂ ಮುಳುವಾಯ್ತಾ…?ಕುಟುಂಬದವರು ಹಾಗೂ ಸ್ನೇಹಿತರ ವಲಯದಲ್ಲಿ ನೀರವ ಮೌನ
ಈ ವೇಳೆ ಮಾತನಾಡಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಸರ್ಕಾರ-ಖಾಸಗಿ ಜಂಟಿ ಸಹಯೋಗ(ಪಬ್ಲಿಕ್ ಪ್ರೈವೇಟ್ ಪಾರ್ಟನರ್‌ಶಿಪ್)ದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಾಧ್ಯತೆಗಳ ಪರಿಶೀಲನೆ ನಡೆಸಿದ್ದೇವೆ.ಇದು ಪೂರ್ವಭಾವಿಯಾಗಿ ನಡೆದ ಸಭೆಯಾಗಿದೆ. ಆಸ್ಪತ್ರೆಯನ್ನು ಖಾಸಗಿ ಸಹಯೋಗದಲ್ಲಿ ಮಾಡಬೇಕೆಂದರೆ ಯಾವೆಲ್ಲ ಅವಕಾಶಗಳಿವೆ, ಹೇಗೆ ಮಾಡಬೇಕು. ಮತ್ತು ಸ್ಥಳೀಯವಾಗಿ ಏನೆಲ್ಲ ಸಾಧ್ಯತೆಗಳು ಹಾಗೂ ಅವಕಾಶಗಳಿವೆ ಎಂದು ಸರ್ಕಾರಕ್ಕೆ ಮಾಹಿತಿ ನೀಡಬೇಕಾಗುತ್ತದೆ. ಮುಂದೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.