ತೈವಾನ್: ಆಗ್ನೇಯ ತೈವಾನ್‌ನಲ್ಲಿ ೬.೯ ತೀವ್ರತೆಯ ಭೂಕಂಪ ಸಂಭಸಿದ ಪರಿಣಾಮ ೬೦೦ ಮೀಟರ್ ಉದ್ದದ ಸೇತುವೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಡ್ರೋನ್ ದೃಶ್ಯಾವಳಿ ಪೂರ್ವ ಹುವಾಲಿಯನ್ ಕೌಂಟಿಯಲ್ಲಿನ ಗಾವೊಲಿಯಾವೊ ಸೇತುವೆಯು ತುಂಡುಗಳಾಗಿ ಬಿದ್ದಿರುವುದನ್ನು ತೋರಿಸಿದೆ. ಭೂಕಂಪದಿಂದಾಗಿ ಸೇತುವೆಯ ಭಾಗಗಳು ಪುಡಿಯಾಗಿದೆ ಎನ್ನಲಾಗಿದೆ.
ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ ೬.೯ ರಷ್ಟು ದಾಖಲಾಗಿದ್ದು, ಭೂಕಂಪವು ತೈವಾನ್‌ನ ಆಗ್ನೇಯ ಭಾಗದಲ್ಲಿರುವ ಚಿಕಾಂಗ್ ಟೌನ್‌ಶಿಪ್ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಸುಮಾರು ೧೪೬ ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಭೂಕಂಪದಿಂದಾಗಿ ಗ್ರಾಮೀಣ ಬೆಲ್ಟ್‌ನಲ್ಲಿ ಕಟ್ಟಡಗಳು ಉರುಳಿದ್ದು, ರೈಲು ಬೋಗಿಗಳು ಹಳಿತಪ್ಪಿವೆ. ಸುನಾಮಿ ಎಚ್ಚರಿಕೆ ನೀಡಲಾಗಿತ್ತು ಆದರೆ ಮತ್ತೆ ಹಿಂಪಡೆಯಲಾಗಿದೆ ಎಂದು ತಿಳಿದುಬಂದಿದೆ.