ಅಂಕೋಲಾ : ಅತ್ಯಂತ ಸಣ್ಣ ಪ್ರಮಾಣದ ಕಾರಣಗಳಿಗೂ ಯುವ ಜನತೆಯು ಆತ್ಮಹತ್ಯೆಯತ್ತ ಸಾಗುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದ್ದು, ಅಂತಹುದೇ ಪ್ರಕರಣ ಇದೀಗ ಮತ್ತೆ ಬೆಳಕಿಗೆ ಬಂದಿದೆ. ಮನೆಯಲ್ಲಿನ ತನ್ನ ಕೋಣೆಯಲ್ಲಿಯೇ 35ರ ಯುವಕನೋರ್ವ ನೇಣಿಗೆ ಶರಣಾದ ಘಟನೆ ತಾಲೂಕಿನ ಭಾಸಗೋಡ ಕೊಗ್ರೆಯಲ್ಲಿ ಸೋಮವಾರ ನಡೆದಿದೆ ಎಂದು ವರದಿಯಾಗಿದೆ. ನಿತ್ಯಾನಂದ ಮಾರುತಿ ಆಗೇರ ಈತನೇ ಮೃತ ದುರ್ದೈವಿ.

RELATED ARTICLES  ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಕ್ರೀಡಾಳುಗಳು ರಾಜ್ಯ ಹಾಗೂ ವಿಭಾಗಮಟ್ಟಕ್ಕೆ ಆಯ್ಕೆ

ಇದನ್ನೂ ಓದಿ – ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಜಾಗ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿಗಳು. ಕುಮಟಾದಲ್ಲಿ ಈ ಎಲ್ಲಾ ಸ್ಥಳಗಳ ವೀಕ್ಷಣೆ.

ಸೋಮವಾರ ಮನೆಯಲ್ಲಿಯೇ ತನ್ನ ಮಲಗುವ ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಮನೆಯ ಜಂತಿಗೆ ನೇಣು ಬಿಗಿದು ಸಾವಿಗೆ ಶರಣಾಗಿದ್ದಾನೆ. ಗೌಂಡಿ ಕೆಲಸವನ್ನು ಮಾಡಿಕೊಂಡಿದ್ದ ಈತ ಅತಿಯಾಗಿ ಸಾರಾಯಿ ಕುಡಿತದ ಚಟದಿಂದಾಗಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಎನ್ನಲಾಗಿದ್ದು ಯಾವುದೋ ವಿಷಯಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.