ಭಟ್ಕಳ: ನಿಂತಿದ್ದ ಬೈಕ್ ಸವಾರನ ಮೇಲೆ ವಾಹನ ಹರಿದು ಹೋಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ಮಣ್ಕುಳಿಯ ಪುಷ್ಪಾಂಜಲಿ ಕ್ರಾಸ್ ಸಮೀಪ ರಸ್ತೆ ಕ್ರಾಸ್ ಮಾಡಲು ನಡೆದಿದೆ. ಮುಟ್ಟಳ್ಳಿಯ ಮರಂಬಳ್ಳಿ ನಿವಾಸಿ ಮಂಜುನಾಥ ಗೊಂಡ ಮೃತ ವ್ಯಕ್ತಿ.

ಈತ ಕೆಲಸಕ್ಕೆ ಹೋಗಲೆಂದು ಮಣ್ಕುಳಿಯ ಪುಷ್ಪಾಂಜಲಿ ಕ್ರಾಸ್ ಸಮೀಪ ರಸ್ತೆ ಕ್ರಾಸ್ ಮಾಡಲು ನಿಂತಿದ್ದ ವೇಳೆ ವಾಹನವೊಂದು ಮುಂಭಾಗದಲ್ಲಿ ಬರುತ್ತಿದ್ದ ಕಾರನ್ನು ಗುದ್ದಿ ರಸ್ತೆ ಕ್ರಾಸ್ ಮಾಡಲು ನಿಂತಿದ್ದ ಬೈಕ್ ಸವಾರನ ಮೇಲೆ ಹರಿದು ಹೋಗಿದೆ.

RELATED ARTICLES  ಯಕ್ಷರಂಗದ ಧ್ರುವತಾರೆಗೆ ನಾಗರಾಜ ನಾಯಕ ತೊರ್ಕೆಯವರಿಂದ ಭಾವಪೂರ್ಣ ನುಡಿನಮನ

ಇದನ್ನೂ ಓದಿ – ಆಟವಾಡುತ್ತಿದ್ದ ಮಗು ಬಿಸಿ ಪಾತ್ರೆಯಲ್ಲಿ ಬಿದ್ದು ಸಾವು : ಮುಗಿಲುಮುಟ್ಟಿದ ಕುಟುಂಬದ ಆಕೃಂದನ

ಘಟನೆಯಿಂದಾಗಿ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ದೌಡಾಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆಂದು ವರದಿಯಾಗಿದೆ.

ವಿಡಿಯೋ ನೋಡಿ.

ಅಪಘಾತ ರಭಸಕ್ಕೆ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು ತಕ್ಷಣ ಸ್ಥಳೀಯರು ಆತನನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾನೆ. ಸದ್ಯ ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

RELATED ARTICLES  ದಿಮ್ಮಣದ ಟೆಂಪೋ ಪಲ್ಟಿ

ವ್ಯಕ್ತಿಯ ಮೇಲೆ ಹರಿದ ವಾಹನ ಐ.ಆರ್.ಬಿ ಯದ್ದು ಎಂಬ ಬಗ್ಗೆ ಸಾರ್ವಜನಿಕರ ವಲಯದಲ್ಲಿ ಕೇಳಿಬಂದಿತ್ತು. ಅದೇ ತರಹ ಸ್ಥಾನೀಯ ಹೇಳಿಕೆ ವರದಿಯಾಗಿತ್ತಾದರೂ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟತೆ ನೀಡಿದ್ದು, ಅದು ಐ.ಆರ್. ಬಿ ವಾಹನ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ವರದಿಯಲ್ಲಾದ ಗೊಂದಲದ ಬಗ್ಗೆಯೂ ಸ್ಪಷ್ಟನೆ ನೀಡಿದೆ.