ಕಾರವಾರ : ಅಡಿಕೆ ದರ ಹೆಚ್ಚುತ್ತಿದ್ದಂತೆ ಉತ್ತರ ಕನ್ನಡದ ಹಲವಡೆ, ಅಡಿಕೆ ಕಳ್ಳತನ ಪ್ರಕರಣಗಳು ಬೆಳಕಿಗೆ ಬರುತ್ತಿತ್ತು, ಇದೀಗ ಅಡಿಗೆ ಕಳ್ಳತನದಲ್ಲಿ ಭಾಗವಹಿಸಿದ್ದ ಅನುಮಾನದ ಮೇಲೆ ಇಬ್ಬರನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ವರದಿಯಾಗಿದೆ ತೋಟದ ಮನೆಯಲ್ಲಿಟ್ಟಿದ್ದ ಅಡಿಕೆ ಕಳ್ಳತನ ಮಾಡಿದ್ದ ಆರೋಪದಲ್ಲಿ ಇಬ್ಬರನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆದಿದೆ.

RELATED ARTICLES  ದಿ, ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿಗೆ ಯಕ್ಷಗಾನ ಹಿರಿಯ ಕಲಾವಿದರಾದ ಹಡಿನಬಾಳ ಶ್ರೀಪಾದ ಹೆಗಡೆ ಆಯ್ಕೆ.

ಅಗಸ್ಟ್ 30 ನೇ ತಾರೀಖು ಅಬ್ದುಲ್ ಮಮ್ಮದ ಸಾಬ್ ಅವರಿಗೆ ಸೇರಿದ್ದ ತೋಟದ ಮನೆಯಲ್ಲಿಟ್ಟದ್ದ ನಾಲ್ಕು ಕ್ವಿಂಟಲ್ ಅಡಿಕೆ ಚೀಲ ಕಳ್ಳತ ಮಾಡಿದ್ದ ಶೇಕರ್ ಗೌಡ (42), ರಾಘವೇಂದ್ರ ಶಿರಟ್ಟಿ (30) ಅಡಿಕೆ ಕಳ್ಳತನ ಮಾಡಿದ್ದ ಆರೋಪಿಗಳಾಗಿದ್ದು ಅಂದಾಜು ಒಂದು ಲಕ್ಷ ಮೌಲ್ಯದ ಅಡಿಕೆ ಇದಾಗಿದೆ.

ಇವರನ್ನು ಅನುಮಾನದ ಮೇಲೆ ಬಂಧಿಸಿ ತನಿಖೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದ್ದು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.