ಕುಮಟಾ : ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಕುಮಟಾ ಇದರ 55 ನೇ ವರ್ಷದ ವಾರ್ಷಿಕ ಸರ್ವಸಾಧಾರಣಾ ಸಭೆಯು ದಿನಾಂಕ: 20-09-2022 ಮಂಗಳವಾರ ದಂದು ಸಂಪನ್ನಗೊಂಡಿತು. ಸಂಸ್ಥೆಯು ಸನ್ 2021-2022 ಆರ್ಥಿಕ ವರ್ಷದಲ್ಲಿ ಒಟ್ಟೂ 24.99 ಲಕ್ಷ ರೂಪಾಯಿ ಲಾಭವನ್ನು ಗಳಿಸಿದೆ ಎಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಕುಮಟಾದ ಅಧ್ಯಕ್ಷರಾದ ಭುವನ್ ಭಾಗ್ವತ್ ಸಭೆಗೆ ಮಾಹಿತಿ ನೀಡಿದರು.

RELATED ARTICLES  ಅಕ್ರಮ‌ವಾಗಿ ಜಾನುವಾರು ಸಾಗಾಟ : ಆರೋಪಿಗಳು ಅರೆಸ್ಟ್

ಕೃಷಿ ಹಾಗೂ ಕೃಷಿಯೇತರ ವಿಭಾಗದಿಂದ ರೂ. 81.26 ಲಕ್ಷದಷ್ಟು ಲಾಭಾವನ್ನುಗಳಿಸಿರುತ್ತದೆ. ಸಾಲ ವಸೂಲಾತಿಯಲ್ಲಿ ಕೃಷಿವಿಭಾಗದಿಂದ ಶೇ – 86.88% ಕೃಷಿಯೇತರ ವಿಭಾಗದಿಂದ – 73.99% ರಷ್ಟು ಪ್ರಗತಿ ಸಾಧಿಸಿ ಕಳೆದ ವರ್ಷಕ್ಕಿಂತಲೂ 24.99 ಲಕ್ಷದಷ್ಟು ಲಾಭವನ್ನುಗಳಿಸಿರುತ್ತದೆ. ಬ್ಯಾಂಕಿನ ಸರ್ವತೋಮುಖ ಸಹಕರಿಸಿದ ಠೇವಣಿದಾರರು ಹಾಗೂ ಸಾಲಗಾರ ಸದಸ್ಯರಿಗೆ, ಸಮಸ್ತ ಸದಸ್ಯ ಬಂಧುಗಳಿಗೆ ಬ್ಯಾಂಕಿನ‌ ಆಡಳಿತ ಮಂಡಳಿಯ ಪರವಾಗಿ ಅನಂತ ಅನಂತ ಧನ್ಯವಾದಗಳನ್ನು ಅವರು ಸಲ್ಲಿಸಿದರು.

RELATED ARTICLES  ನಾಟಕಗಳು ಬದುಕಿನ ನೈಜತೆಯನ್ನು, ಸಾಮಾಜಿಕ ಜವಾಬ್ದಾರಿಯನ್ನು ತಿಳಿಸುತ್ತದೆ. – ನಾಗರಾಜ ನಾಯಕ ತೊರ್ಕೆ

ಸಂಸ್ಥೆಯ ಮುಂದಿನ ನಡೆ ಹಾಗೂ ಇತರ ಚಟುವಟಿಕೆಗಳ ಕುರಿತಾಗಿ ಸುದೀರ್ಘ ಚರ್ಚೆ ನಡೆಸಿ ಸಭೆಯನ್ನು ಸಂಪನ್ನಗೊಳಿಸಲಾಯಿತು.