ಕಾರವಾರ : ಸಾಂಪ್ರದಾಯಿಕ ಮೀನುಗಾರರು ಕಳೆದ ಒಂದು ತಿಂಗಳಿಂದ ಮೀನುಗಾರಿಕೆ ಇಲ್ಲದೆ ಕಂಗಾಲಾಗಿದ್ರು ಇಂದು ವಿಜಯ ದಶಮಿ ಕೊಡುಗೆಯಾಗಿ ಇಲ್ಲಿನ ಮೀನುಗಾಗರರಿಗೆ ಬಂಪರ್ ಮೀನಿನ ಭೇಟೆಯಾಗಿದೆ.
ಕೊರಗಿದ ಮೀನುಗಾರರು ಇಂದು ತೀರದ ತುಂಬಾ ಮೀನು ನೋಡಿ ಸಂತೋಷವೋ ಸಂತೋಷ, ಒಂದೆಡೆ ಬಲೆಯಲ್ಲಿ ತುಂಬಿ ತುಂಬಿ ಮೀನನ್ನ ಹೊತ್ತು ತರುತ್ತಿರುವ ಮೀನುಗಾರರು, ಇನ್ನೊಂದೆಡೆ ಗುಂಪು ಗುಂಪಾಗಿ
ಕಡಲತೀರದಲ್ಲಿ ಮೀನನ್ನ ಆರಿಸುತ್ತಿರುವ ಸ್ಥಳಿಯರು ಹಾಗೂ ಮೀನುಗಾರರು, ಇಂತ ಇತಿಹಾಸ ಮರುಕಳಿಸುವ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ರವೀಂದ್ರನಾಥ ಕಡಲತೀರದಲ್ಲಿ. ಇಂದು ಮುಂಜಾನೆ ಅದೆ
ಸಪ್ಪೆ ಮುಖ ಹೊತ್ತು ಏನೋ ಒಂದು ಆಶಾಭಾವನೆಯಿಂದ ಸಮುದ್ರಕ್ಕಿಳಿದು ಮೀನಿನ ಶೀಖಾರಿಗೆ ತೆರಳಿದ ಕಾರವಾರದ ಸಾಂಪ್ರದಾಯಿಕ ಮೀನುಗಾರರಿಗೆ ವಿಜಯದಶಮಿಯಂದು ದುರ್ಗಾಮಾತೆ ಬಂಪರ್ ಮೀನಿನ ಶಿಖಾರಿ
ಕಾಣಿಸಿದ್ದಾಳೆ, ಸುಮಾರು ೩೦ಮೀ ಕಡಲತೀರದುದ್ದಕ್ಕೂ ಎಲ್ಲಿನೋಡಿದ್ರು ಮೀನೆ ಮೀನು, ಮೀನುಗಾರರು ಉತ್ಸಾಹದಿಂದ ಬಲೆಯಲ್ಲಿ ಮೀನನ್ನ ತುಂಬಿ ತುಂಬಿ ಸುಸ್ತಾದ್ರೆ ಇನ್ನೊಂದೆಡೆ ಸ್ಥಳಿಯರು ಕೂಡಾ ಪುಕ್ಸಟ್ಟೆ ಸಿಕ್ಕಿದ ಮೀನನ್ನ ಆರಿಸುತ್ತಿದ್ರು, ಇನ್ನು ಈ ತರಹ ಮೀನಿನ ಶಿಖಾರಿ ಕಳೆದ ನಾಲ್ವತ್ತು ಐವತ್ತು ವರ್ಷದ ಹಿಂದೆ ಆಗಿತ್ತಂತೆ, ಆ ಬಳಿಕ ಇಂತ ಮೀನಿನ ಶಿಖಾರಿ ಇಲ್ಲಿನ ಮೀನುಗಾರರು ನೋಡೆ ಇರ್ಲಿಲ್ವಂತೆ, ಆದ್ರೆ ಇಂದು
ವಿಜಯದಶಮಿಯಂದು ಮೀನುಗಾರರ ಬಲೆ ಸಿಕ್ಕಿದ ಮೀನು ಲಕ್ಷಾಂತರ ರೂ ಲಾಭವನ್ನ ತಂದುಕೊಟ್ಟಿದೆ, ತೆರೆಹವಾರಿ ಮೀನು ಇಂದು ಮೀನುಗಾರರ ಬಲೆಗೆ ಸಿಕ್ಕಿದ್ದು ಕಡಲತೀರದುದ್ದಕ್ಕೂ ಮೀನಿನ ಜಾತ್ರೆಯೇ ನಡೀತು,
ಒಟ್ಟಾರೆ ಮೀನಿನ ಬರಗಾಲದಲ್ಲಿ ಹೆಚ್ಚಿನ ಬೆಲೆಗೆ ಮೀನು ಕೊಳ್ಳುತ್ತಿದ್ದ ಸ್ಥಳಿಯರ ಬಾಯಿಗೆ ಇಂದು ಪುಕ್ಸಟ್ಟೆ ತೆರಹವಾರಿ ಮೀನು ನಾಲಿಗೆಗೆ ರುಚಿ ತಂದ್ರೆ ಮೀನುಗಾರರು ಇದೆ ರೀತಿ ನಿರಂತರ ಮೀನಿನ ಶಿಖಾರಿ ಆಗ್ಲಿ ಅಂತಾರೆ.