ಶಿರಸಿ: ಕನ್ನಡದ ಪ್ರಸಿದ್ದ ಹಾಸ್ಯ ನಟ, ಬಹುಮುಖ ಪ್ರತಿಭೆ ಕಲಾವಿದ ಟೆನ್ನಿಸ್ ಕೃಷ್ಣ ಅವರು ನಗರದ ಹೊರ ವಲಯದಲ್ಲಿ ಇರುವ ನಿಸರ್ಗಮನೆ ವೇದ ಆರೋಗ್ಯ ಕೇಂದ್ರಕ್ಕೆ ಭೇಟಿ‌ ನೀಡಿ ಮೆಚ್ಚುಗೆ‌ ಸೂಚಿಸಿದರು. ನಿಸರ್ಗ ಮನೆಯ‌ ಪರಿಸರ, ಇಲ್ಲಿ‌ನ ಆರೋಗ್ಯ ಸಂಬಂಧಿ ಚಿಕಿತ್ಸೆ, ಆಹಾರ ಪದ್ದತಿ ಅನುಸರಿಸಿ ತಮ್ಮ ಆರೋಗ್ಯವೂ ಸುಧಾರಣೆ ಆಗಿದ್ದನ್ನು ಉಲ್ಲೇಖಿಸಿದ ಅವರು, ಯಾಕೆ ಟೆನ್ನಿಸ್ ವೀಕ್ ಆಗಿದೀರಿ ಅಂತ ಜನ ಕೇಳ್ತಾರೆ, ಅವರಿಗೆಲ್ಲ ನಾನು ಸ್ಟ್ರಾಂಗ್ ಆಗಿದ್ದೇನೆ ಎನ್ನುತ್ತೇನೆ. ನನ್ನ ಆರೋಗ್ಯ ಸುಧಾರಣೆಗೆ ನಿಸರ್ಗಮನೆ ಕಾರಣ ಎಂದೂ ಬಣ್ಣಿಸಿದರು.

RELATED ARTICLES  ಕೋಟಿತೀರ್ಥದಲ್ಲಿ ಮುಳುಗಿ ಮಹಿಳೆ ಸಾವು

ನನ್ನ ಮಗ ನಾಗಾರ್ಜುನ್ ಕೂಡ ಇಲ್ಲಿ ಚಿಕಿತ್ಸೆ ಪಡೆದು ಉದರ ಸಮಸ್ಯೆಯಿಂದ ಗುಣಮುಖರಾಗಿದ್ದಾರೆ. ನಮ್ಮ ಕುಟುಂಬದ ಆರೋಗ್ಯ ಸುಧಾರಣೆಗೆ ಈ‌ ಕೇಂದ್ರ ಕಾರಣ ಎಂದ ಟೆನ್ನಿಸ್, ಡಾ.ವೆಂಕಟರಮಣ ಹೆಗಡೆ ಅವರೊಂದಿಗಿನ ಒಡನಾಟ ಪ್ರಸ್ತಾಪಿಸಿ, ಎಲ್ಲರೂ ಆರೋಗ್ಯ ಪೂರ್ಣ ಜೀವನ ಶೈಲಿ ರೂಢಿಸಿಕೊಳ್ಳಬೇಕು ಎಂದೂ ಹೇಳಿದರು.

ಈ ವೇಳೆ‌ ಮಾತನಾಡಿದ ಪ್ರಸಿದ್ದ ವೈದ್ಯ ಅಂಕಣಕಾರ ಡಾ. ವೆಂಕಟ್ರಮಣ ಹೆಗಡೆ, ಸಾವಿರಾರು ಚಲನಚಿತ್ರ, ಧಾರಾವಾಹಿ, ನಾಟಕಗಳಲ್ಲೂ ಪಾತ್ರ ಮಾಡಿದ ಟೆನ್ನಿಸ್ ಕೃಷ್ಣ ಅವರು ತಮ್ಮ ಮಾತಿನ ಶೈಲಿಯ‌ ಮೂಲಕವೇ ಜನಪ್ರೀಯರಾಗಿದ್ದಾರೆ. ಕೃಷ್ಣ ಅವರು ನಮ್ಮ ನಿಸರ್ಗ ಮನೆಯ ಸಾಧಕರು ಎಂಬುದು ನಮ್ಮ ಹೆಮ್ಮೆ ಎಂದರು.

RELATED ARTICLES  ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗೆ ಒತ್ತಾಯಿಸಿ ಪಾದಯಾತ್ರೆ. : ಅನಂತಮೂರ್ತಿ ಹೆಗಡೆ ನೇತ್ರತ್ವದಲ್ಲಿ ನಾಳೆಯಿಂದ ಪ್ರಾರಂಭ.

ಈ ವೇಳೆ ಗುಲಬುರ್ಗದ ಸ್ವಂತ ಊರಿನ‌ ಮುಲ್ಲಾಮಾರಿ ಆಶ್ರಮದ ಅವಧೂತರಾದ ಶ್ರೀಅಭಿನವ ಶರಣ ಶಂಕರಲಿಂಗ ಸ್ವಾಮೀಜಿಗಳು, ಹುಮನಾಬಾದ್ ಪುರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸೀಗಿ, ಬೆಂಗಳೂರಿನ‌ ಪ್ರಸಿದ್ದ ರಾಮ ಲಕ್ಷ್ಮಣ ಕೇಟರಿಂಗ್ ನ ಮಾಲಕ ರಾಮ, ಎಸ್.ಎಸ್.ಕ್ಯಾಟರಿಂಗ್ ನ ಶ್ರೀಧರ, ಆಯುರ್ವೇದ ವೈದ್ಯ ಡಾ. ವೆಂಕಟೇಶ್ ಗಾಂವಕರ್ ಇತರರು ಇದ್ದರು.