ಕಾರವಾರ : ಕಳೆದ ಹಲವು ದಿನದಿಂದ ತೊಂದರೆ ಅನುಭವಿಸುತ್ತಿದ್ದ ಉತ್ತರ ಕನ್ನಡದ ವಿವಿಧ ತಾಲೂಕಿನ ಜನರಿಗೆ ಇದೊಂದು ಗುಡ್ ನ್ಯೂಸ್ ಲಭ್ಯವಾಗಿದೆ. ಹೌದು ಕಾರವಾರ-ಜೊಯಿಡಾ-ಬೆಳಗಾವಿ ರಾಜ್ಯ
ಹೆದ್ದಾರಿ 34ರ ಅಣಶಿ ಘಟ್ಟದಲ್ಲಿ ಎಲ್ಲಾ ವಾಹನಗಳ
ಸಂಚಾರಕ್ಕೆ ಅವಕಾಶ ನೀಡಿ ಉಪವಿಭಾಗಾಧಿಕಾರಿ
ಆದೇಶ ಹೊರಡಿಸಿದ್ದಾರೆ.
ಭಾರಿ ಮಳೆಯಾದ ಸಂದರ್ಭದಲ್ಲಿ ಅಣಶಿ ಘಟ್ಟದಲ್ಲಿ
ಭೂ ಕುಸಿತ ಉಂಟಾದ ಕಾರಣ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಈ ರಸ್ತೆಯಲ್ಲಿ ಭಾರಿ ವಾಹನ ಸಂಚಾರ ನಿಷೇಧ ಹೇರಿ ಆದೇಶ ಹೊರಡಿಸಿದ್ದರು. ಈಗ ಮಳೆ ಕಡಿಮೆಯಾಗಿದ್ದು, ಪ್ರತಿನಿತ್ಯ ನೂರಾರು ಜನರು ಕಾರವಾರದಿಂದ ಜೋಯಿಡಾ, ಜೊಯಿಡಾದಿಂದ ಕಾರವಾರಕ್ಕೆ ವಿವಿಧ ಕೆಲಸ ಕಾರ್ಯಗಳಿಗೆ ಆಗಮಿಸುತ್ತಾರೆ.
ಈ ಮಾರ್ಗದಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಿದ ಕಾರಣ ಪ್ರತಿನಿತ್ಯ ಸಂಚರಿಸುವವರು ಸಮಸ್ಯೆ ಎದುರಿಸುತ್ತಿದ್ದರು. ಮಳೆ ಕಡಿಮೆಯಾಗಿದ್ದು, ಭೂ ಕುಸಿತದ ಆತಂಕ ಕಡಿಮೆ ಆಗಿರುವುದರಿಂದ ಅಣಶಿ ಘಟ್ಟದ ಮೂಲಕ ಎಲ್ಲಾ ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡಿ ಕಾರವಾರ ಉಪವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ್ ಅನುಮತಿಸಿದ್ದಾರೆ.