ಶಿರಸಿ: ನಗರದ ವೆಂಕಟರಾವ್ ನಿಲೇಕಣಿ ಪದವಿಪೂರ್ವ ಕಾಲೇಜನಲ್ಲಿ ವಿದ್ಯಾರ್ಥಿಗಳು ಮೊಬೈಲ್‌ ಫೋನ್‌ನನ್ನು ಹೆಚ್ಚಾಗಿ ಬಳುಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದಿಢೀರ್‌ ದಾಳಿ ನಡೆಸಿದ ಪ್ರಾಂಶುಪಾಲ ನರೇಂದ್ರ ನಾಯಕ ನೂರಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ವಿದ್ಯಾರ್ಥಿಗಳು ಕಳೆದ ಹಲವು ದಿನಗಳಿಂದ
ಮೊಬೈಲ್‌ಗಳನ್ನು ಕಾಲೇಜುಗಳಲ್ಲಿ ಬಳಸುತ್ತಿರುವ ಆರೋಪ ಕೇಳಿಬಂದಿತ್ತು. ಆದಕಾರಣ ಈ ಆರೋಪದ ಕುರಿತಾಗಿ ಕಾರ್ಯಾಚರಣೆ ನಡೆಸಿದ ಪ್ರಾಂಶುಪಾಲ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿದ್ದ ನೂರಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

RELATED ARTICLES  ಮೂರು ದಿನದ ಹಸುಗೂಸನ್ನು ಆಸ್ಪತ್ರೆಯ ಆವರಣದಲ್ಲಿ ಬಿಟ್ಟು ಹೋದ ಹೆತ್ತವರು : ಏನಿದು ಘಟನೆ..?

ಕಾಲೇಜಿನಲ್ಲಿ ಮೊಬೈಲ್‌ ಫೋನ್‌ಗಳನ್ನು ಬಳಸಬೇಡಿ ಎಂದು ಹತ್ತಾರು ಬಾರಿ ಹೇಳಿದರೂ ಸಹ ವಿದ್ಯಾರ್ಥಿಗಳು ಪ್ರಾಂಶುಪಾಲರ ಮಾತಿಗೆ ಬೆಲೆ ಕೊಡದೆ ಕಾಲೇಜು ಆವರಣದಲ್ಲಿ ಮೊಬೈಲ್ ಫೋನ್ ಬಳಸುತ್ತಿರುವುದರಿಂದ ಈ ದಾಳಿ ನಡೆಸಲಾಗಿದೆ.

RELATED ARTICLES  ರಾಷ್ಟ್ರ ಮಟ್ಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾನೆ ಅಭಿನೀತ್ ಭಟ್

ಅಲ್ಲದೇ ಮೊಬೈಲ್ ಫೋನ್ ಬಳಸುತ್ತಿದ್ದ
ವಿದ್ಯಾರ್ಥಿಗಳಿಗೆ ಅವರ ಪಾಲಕರ ಸಮ್ಮುಖದಲ್ಲಿ ಎಚ್ಚರಿಕೆ ನೀಡಿ ಮೊಬೈಲ್ ಫೋನ್ ವಾಪಸ್ ನೀಡಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ, ಎಂದು ವರದಿಯಾಗಿದೆ.