ದಾಂಡೇಲಿ:ಗೋವಾ ಸರ್ಕಾರದ ಬೈನಾ ಪ್ರದೇಶದಲ್ಲಿ ವಾಸಿಸುತ್ತಿರುವ 54 ಕನ್ನಡಿಗರ ಮನೆಗಳನ್ನು ತೆರವುಗೊಳಿಸಿ ಅವರನ್ನು ಬೀದಿ ಪಾಲು ಮಾಡಿರುವುದನ್ನು ಖಂಡಿಸಿ, ಬೀದಿಪಾಲಾದ ಗೋವಾದಲ್ಲರಿವ ಕನ್ನಡಿಗರಿಗೆ ರಕ್ಷಣೆ ನೀಡಿ, ಸೂಕ್ತ ರೀತಿಯಲ್ಲಿ ಪರಿಹಾರ ನೀಡುವಂತೆ ಆಗ್ರಹಿಸಿ ಗುರುವಾರ ನಗರದ ಕರ್ನಾಟಕ ರಕ್ಷಣಾ ವೇದಿಕೆ (ಪ್ರ) ಬಣವು ವಿಶೇಷ ತಹಶೀಲ್ದಾರ್ ಶ್ರೀಶೈಲ ಪರಮಾನಂದ ಅವರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿ ಆಗ್ರಹಿಸಿದೆ.
ಮನವಿಯಲ್ಲಿ ಗೋವಾ ರಾಜ್ಯದ ಬೈನಾ ಪ್ರದೇಶದಲ್ಲಿರುವ ಕನ್ನಡಿಗರ ಮೇಲೆ ನಿತ್ಯ ದೌರ್ಜನ್ಯಗಳು ನಡೆಯುತ್ತಿದೆ. ಇದನ್ನು ಈ ಕೂಡಲೆ ತಡೆಯಬೇಕು ಮತ್ತು ಅಲ್ಲಿಯ ಕನ್ನಡಿಗರಿಗೆ ರಕ್ಷಣೆ ಮತ್ತು ದುಡಿದು ಬದುಕಲು ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.

RELATED ARTICLES  ಜುಲೈ18 ರಿಂದ ಜುಲೈ 31ರ ವರೆಗೆ ಕುಮಟಾದ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದಲ್ಲಿ ಸಾರ್ವಜನಿಕ ದೇವದಶ೯ನ ಬಂದ್

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರ) ಬಣದ ತಾಲೂಕಾಧ್ಯಕ್ಷ ಪ್ರವೀಣ ಕೋಠಾರಿ, ಉಪಾಧ್ಯಕ್ಷ ಪ್ರವೀಣ ದಶಿಮಿ, ಆದಿ ಜಾಂಬವಂತ ಸಂಘದ ಅಧ್ಯಕ್ಷ ಚಂದ್ರಕಾಂತ.ಬಿ.ನಡಿಗೇರ, ನವಚೈತನ್ಯ ಸೇವಾ ಸಂಘದ ಅಧ್ಯಕ್ಷ ಕಲಗುಂಡ ಸುರನಾಯಕ, ಸಂಘಟನೆಯ ಪದಾಧಿಕಾರಿಗಳಾದ ವಿನೋಧ ಪೂಜಾರಿ, ವಿನೋಧ ಬೆಜಮ, ಪವನ ಪಾಯಿ, ದೇವನ್ ಕರೆಕರ್, ಪ್ರಮ್ ಕುಮಾರ್, ಹೆನ್ರು ಸಿಕಮನಿ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES  ಪ್ರಜ್ವಲೋತ್ಸವ -1, ಭಜನಾಮೃತ, ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಸಂಪನ್ನ.