ದೇಶದಲ್ಲಿ ಅಕ್ಕಿಯ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ. ಮುಂಗಾರು ಉತ್ಪಾದನೆಯಲ್ಲಿನ 11% ಇಳಿಕೆಯ ನಿರೀಕ್ಷೆ ಹಾಗೂ ಬಾಸ್ಮತಿಯೇತರ ಅಕ್ಕಿಯ ರಫ್ತು ಹೆಚ್ಚಳದ ಪರಿಣಾಮ ಅಕ್ಕಿಯ ಸ್ಥಳೀಯ ದರದಲ್ಲಿ ಏರಿಕೆಯಾಗಬಹುದು ಎಂದು ಕೇಂದ್ರ ಆಹಾರ ಸಚಿವಾಲಯ ತಿಳಿಸಿದೆ.

ಕಳೆದ ಸೆಪ್ಟೆಂಬರ್‌ 19ರ ವೇಳೆಗೆ ಅಕ್ಕಿಯ ರಿಟೇಲ್‌ ದರದಲ್ಲಿ ಹಿಂದಿನ ವಾರಕ್ಕೆ ಹೋಲಿಸಿದರೆ 0.24% ಏರಿಕೆಯಾಗಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ 2.46% ಮತ್ತು ಕಳೆದ ವರ್ಷದ ಅವಧಿಗೆ ಹೋಲಿಸಿದರೆ 8.67% ಹೆಚ್ಚಳವಾಗಿದೆ. ಐದು ವರ್ಷಗಳ ಸರಾಸರಿ ತೆಗೆದುಕೊಂಡರೆ 15.14% ವೃದ್ಧಿಸಿದೆ.

ಸರ್ಕಾರ ಸೆಪ್ಟೆಂಬರ್‌ನಲ್ಲಿ ಕಡಿ ಅಕ್ಕಿಯ (ನುಚ್ಚಕ್ಕಿ) ರಫ್ತನ್ನು ನಿಷೇಧಿಸಿತ್ತು. ಬಾಸ್ಮತಿಯೇತರ ಅಕ್ಕಿಯ ರಫ್ತು ಮೇಲೆ 20% ಸುಂಕ ಹೆಚ್ಚಿಸಿತ್ತು. ಕಡಿ ಅಕ್ಕಿ ದರ ಕೆ.ಜಿಗೆ 16 ರೂ.ಗಳಿಂದ 22 ರೂ.ಗೆ ಏರಿಕೆಯಾಗಿದೆ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 09-04-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?