ಕುಮಟಾ: ಇಲ್ಲಿನ ಲಯನ್ ಸೇವಾ ಭವನ ದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಸಾಧಕ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ & ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣ ಸಮಾರಂಭ ನಡೆಯಿತು. ಸಾಧಕ ಶಿಕ್ಷಕರಾದ ಸತೀಶ್ ನಾಯ್ಕ, ಮಂಜುನಾಥ ನಾಯ್ಕ, ಶ್ರೀಕಾಂತ್ ಹೆಗಡೆ, ಮಹದೇವ್ ಗೌಡ, ಶೈಲ ಗುನಗಿ, ಹಾಗೂ ನಿವೃತ್ತ ಶಿಕ್ಷಕರಾದ ಮಂಗಳ ನಾಯಕ್ ಇವರುಗಳಿಗೆ ಲಯನ್ಸ್ ಕ್ಲಬ್ ಕುಮಟಾದಿಂದ ವಿಶೇಷ ಸನ್ಮಾನ ಮಾಡಲಾಯಿತು. ಹಾಗೆ ಲಯನ್ಸ್ ಕ್ಲಬ್ ಕುಮಟಾ ಆಯೋಜಿಸಿದ್ದ ದೇಶಭಕ್ತರ ಛದ್ಮವೇಷ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಕ್ಲಬ್ ನ ಅಧ್ಯಕ್ಷರಾದ ವಿದ್ಯಾ ಶೇಟ್, ಕಾರ್ಯದರ್ಶಿ ಡಾ.ನಾಗರಾಜ ಭಟ್ , ಖಜಾಂಚಿ ಸಪ್ನ ನಾಯ್ಕ, ಪಿ.ಡಿ.ಜಿ ಡಾ.ಗಿರೀಶ್ ಕೂಚಿನಾಡ್ ಭಾಗವಹಿಸಿದ್ದರು. ಅಧ್ಯಕ್ಷೆ ವಿದ್ಯಾ ಶೇಟ್ ಸ್ವಾಗತಿಸಿದರು, ಡಾ.ಗಿರೀಶ್ ಕುಚಿನಾಡ ಪ್ರಾಸ್ತಾವಿಕ ಮಾತನಾಡಿದರು, ಡಾ.ನಾಗರಾಜ ಭಟ್ ಸಾಧಕ ಶಿಕ್ಷಕರಿಗೆ ಗೌರವದ ಸನ್ಮಾನ ನುಡಿಗಳನ್ನು ಹೇಳಿ ಸ್ಪರ್ಧಾ ವಿಜೇತರ ವಿವರ ಹೇಳಿದರು. ಎಂ.ಎನ್ ಹೆಗಡೆ ಕಾರ್ಯಕ್ರಮ ನಿರೂಪಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಸದಸ್ಯರು, ಊರ ನಾಗರಿಕರು ಭಾಗವಹಿಸಿ ಅರ್ಥಪೂರ್ಣ ಕಾರ್ಯಕ್ರಮವನ್ನು ಸಾಕ್ಷೀಕರಿಸಿದರು.

RELATED ARTICLES  ಕಾರವಾರ: ಹಿಂದೂ ಯುವಕರನ್ನು ಟಾರ್ಗೆಟ್ ಮಾಡಿದರೆ ಹುಷಾರ್..!