ಬೆಂಗಳೂರು : ಇದೇ ಮೊದಲ ಬಾರಿಗೆ ಉತ್ತರ ಕ‌ನ್ನಡ ಜಿಲ್ಲೆಯ ಶಾಸಕರೆಲ್ಲರೂ ಈ ಚರ್ಚೆಯಲ್ಲಿ ಭಾಗವಹಿಸಿದ್ದು, ಜಿಲ್ಲೆಯ ಪರ ಗಟ್ಡಿ ಧ್ವನಿ ಮೊಳಗಿಸಿದ್ದಾರೆ. ನಿನ್ನೆ ಪ್ರಶ್ನೋತ್ತರ ಕಲಾಪ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಆರ್.ವಿ.ದೇಶಪಾಂಡೆ, ಶಿವರಾಂ ಹೆಬ್ಬಾರ್, ದಿನಕರ ಶೆಟ್ಟಿ, ರೂಪಾಲಿ ನಾಯ್ಕ್ , ಸುನೀಲ್ ನಾಯ್ಕ್ ಸೇರಿದಂತೆ ಎಲ್ಲ ಸದಸ್ಯರು ಪಕ್ಷಾತೀತವಾಗಿ ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ.

RELATED ARTICLES  ಪರಿವರ್ತನ ರಥಯಾತ್ರೆ : ಬೃಹತ್‌ ಸಮಾವೇಶಕ್ಕೆ ತಯಾರಿ

ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ತಾತ್ವಿಕ ಒಪ್ಪಿಗೆ ನೀಡಿದ್ದು, ಎಲ್ಲಿ ಆಗಬೇಕು ಎಂಬುದನ್ನು ಜಮೀನು ಲಭ್ಯತೆ ಆಧಾರದ ಮೇಲೆ ಸ್ಥಳ ನಿರ್ಧಾರ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿಧಾನಸಭೆಗೆ ಭರವಸೆ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಗೆ ಉತ್ಕೃಷ್ಟ ದರ್ಜೆಯ ಆರೋಗ್ಯ ಸೇವೆ ಸಿಗಬೇಕು ಎಂಬುದರಲ್ಲಿ ಎರಡನೇ ಮಾತೇ ಇಲ್ಲ. ಮುಖ್ಯಮಂತ್ರಿಗಳು ಈಗಾಗಲೇ ನಮವೆ ಭರವಸೆ ನೀಡಿದ್ದಾರೆ. ತಾತ್ವಿಕ ಒಪ್ಪಿಗೆಯನ್ನು ನೀಡಿದ್ದಾರೆ. ವಿಧಾನಸಭೆ ಕಲಾಪ ಮುಗಿದ ತಕ್ಷಣ ಮತ್ತೊಮ್ಮೆ ಸಭೆ ನಡೆಸಿ ಆದಷ್ಟು ಬೇಗ ಆಸ್ಪತ್ರೆ ವಿಚಾರ ಇತ್ಯರ್ಥಗೊಳಿಸುತ್ತೇವೆ ಎಂದರು.

RELATED ARTICLES  ನಾಳೆ ಉತ್ತರಕನ್ನಡದಲ್ಲಿ ಲಸಿಕೆ ಲಭ್ಯತೆಯ ವಿವರ.