ಉತ್ತರ ಕನ್ನಡ ಜಿಲ್ಲೆಯ ಸಿ.ಇ.ಎನ್ ಅಪರಾಧ ಪೊಲೀಸ ಠಾಣೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಾಪ್ತರ ಆಶ್ಲೀಲ ವಿಡಿಯೋ ಅಪ್‌ಲೋಡ್ ಮಾಡಿದ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. ದಿನಾಂಕ: 06-07-2021 ರಂದು ಸೆನ್, ಪೊಲೀಸ್ ಠಾಣೆ, ಕಾರವಾರದಲ್ಲಿ ಸದರಿ ಆರೋಪಿತನಾದ ಹರ್ಷಲ್ ತಂದೆ ಬಲರಾಮ್ ರೌಲ್, ವಯಸ್ಸು : 37 ವರ್ಷ, ಶಿವನಗಾಂವ, ನಾಗಪುರ, ಮಹಾರಾಷ್ಟ್ರ ಈತನ ವಿರುದ್ಧ ಸಾಮಾಜಿಕ ಜಾಲ ತಾಣವಾದ ಫೇಸ್‌ಬುಕ್‌ನಲ್ಲಿ ಅಪ್ರಾಪ್ತ ಮಕ್ಕಳ ಅಶ್ಲೀಲ ವಿಡಿಯೋ ಅಪ್‌ಲೋಡ್ ಮಾಡಿದ ಅಪರಾಧದ ಬಗ್ಗೆ ಠಾಣೆಯ ಗುನ್ನಾ ನಂ: 09/2021 ಕಲಂ : 67(2) ಐ.ಟಿ ಕಾಯ್ದೆ ನೇದ್ದರಂತೆ ಪ್ರಕರಣ ದಾಖಲಸಿಕೊಳ್ಳಲಾಗಿತ್ತು.
ಪೋಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ, ಮಾನ್ಯ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಸದರಿ ಪ್ರಕರಣದ ತನಿಖೆಯನ್ನು ಪ್ರಕರಣದ ತನಿಖಾಧಿಕಾರಿಯವರಾದ ಶ್ರೀ ಸೀತಾರಾಮ ಪಿ. ಪೊಲೀಸ ನಿರೀಕ್ಷಕರು ರವರು ಕೈಗೊಂಡು ಮಾನ್ಯ ಸಿಜೆಎಮ್ ನ್ಯಾಯಾಲಯ ಕಾರವಾರರವರಿಗೆ ಆರೋಪಿತನ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
ಸದರಿ ಪ್ರಕರಣದ ವಿಚಾರಣೆಯು ಮಾನ್ಯ ಸಿ.ಜೆ.ಎಮ್. ನ್ಯಾಯಾಲಯ ಕಾರವಾರದಲ್ಲಿ ನಡೆದು ಆರೋಪಿತನಾದ ಹರ್ಷಲ್ ತಂದೆ ಬಲಿರಾಮ್ ರೌಲ್, ವಯಸ್ಸು: 37 ವರ್ಷ, ಶಿವನಗಾಂವ, ನಾಗಮಠ, ಮಹಾರಾಷ್ಟ್ರ ಈತನಿಗೆ ಮಾನ್ಯ ನ್ಯಾಯಾಲಯವು 1000 ರೂ ದಂಡ ಮತ್ತು 3 ತಿಂಗಳ ಸಾದಾ ಕಾರಾಗೃಹ ವಾಸ ವಿಧಿಸಿ ಶಿಕ್ಷೆಯನ್ನು ನೀಡಿದೆ.
ಈ ಪ್ರಕರಣದ ತನಿಖೆಯನ್ನು ಶ್ರೀ ಸೀತಾರಾಮ,ಪಿ ಪೊಲೀಸ್ ನಿರೀಕ್ಷಕರು ಸಿ .ಇ.ಎನ್. ಅಪರಾಧ ಪೊಲೀಸ ಠಾಣೆ ರವರು ತನಿಖೆಯನ್ನು ಮಾಡಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ. ತನಿಖಾ ಸಹಾಯಕರಾಗಿ ಸಿಎಚ್‌ಸಿ-572 ಸುದರ್ಶನ್ ನಾಯ್ಕ, ಸಿಪಿಸಿ 631 ಮಂಜುನಾಥ ಹೆಗಡೆರವರು ಹಾಗೂ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆ ವೇಳೆಯಲ್ಲಿ ಸಿಪಿಸಿ-1283 ಹನುಮಂತಪ್ಪ ಕಬಾಡಿ ರವರಯ ಕೋರ್ಟ ವಾಚ್ ಕರ್ತವ್ಯ ನಿರ್ವಹಿಸಿದ್ದು ಇರುತ್ತದೆ. ಸದರಿ ಪ್ರಕರಣದ ವಿಚಾರಣೆಯಲ್ಲಿ ಮಾನ್ಯ ನ್ಯಾಯಾಲಯದ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು ಮಂಜುನಾಥ ನಾಯ್ಕ ರವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಇದನ್ನೂ ಓದಿ – ನವಜಾತ ಶಿಶುವಿನ ಮಾರಾಟ : ಲಕ್ಷ ಲಕ್ಷ ರೂಪಾಯಿ ಡೀಲ್..! ನಂತರ ಗೋಳಾಡಿದ ತಾಯಿ.
ಸದರಿ ಪ್ರಕರಣದಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿ, ಅವರಿಗೆ ಕಾರವಾರ ಎಸ್.ಪಿ ಯವರು ಬಹುಮಾನ ಘೋಷಿಸಿದ್ದಾರೆ.