ಕಾರವಾರ‌ : ಕಳ್ಳರನ್ನು ತಡೆಯುವುದಕ್ಕಾಗಿ ಅದೆಷ್ಟೇ ಕಠಿಣ ನಿಯಮಗಳು ಜಾರಿಯಾದರೂ ಸಹ ಕಳ್ಳರು ಹೊಂದಿಲ್ಲೊಂದು ರೀತಿಯಲ್ಲಿ ಕಳ್ಳತನಕ್ಕೆ ಮುಂದಾಗುತ್ತಿದ್ದಾರೆ. ತಾಲೂಕಿನ ಮಲ್ಲಾಪುರ ಟೌನ್‌ಶಿಪ್‌ನಲ್ಲಿ ನಡೆದ ಘಟನೆಯೊಂದು ಇದೀಗ ಪೊಲೀಸ್ ಇಲಾಖೆಗೆ ಹೊಸ ಚಾಲೆಂಜ್ ನೀಡಿದ್ದು, ಘಟನೆಯ ಬಗ್ಗೆ ತಿಳಿದ ಜನತೆ ಮೂಗಿನ ಮೇಲೆ ಬೆರಳು ಇಡುವಂತೆ ಮಾಡಿದೆ.

ಹೌದು ಇಲ್ಲಿ ಎಟಿಎಂನ ಸಿಸಿ ಕ್ಯಾಮೆರಾವನ್ನು ಒಡೆದು ಹಾಕಿ ನಂತರ ರಾಷ್ಟ್ರೀಕೃತ ಬ್ಯಾಂಕ್ ಒಂದಕ್ಕೆ ಸೇರಿದ ಎಟಿಎಂನನ್ನು ಒಡೆದು ಅಲ್ಲಿಂದ ಹಣದೋಚುವ ವಿಫಲ ಯತ್ನ ನಡು ರಾತ್ರಿ ನಡೆದಿದೆ. ರಾತ್ರಿ ಸುಮಾರು ಒಂದು ಗಂಟೆಯ ವೇಳೆಯಲ್ಲಿ ಈ ಕಳ್ಳತನಕ್ಕೆ ಯತ್ನಿಸಿದ್ದಾರೆ ದುಷ್ಕರ್ಮಿಗಳು.

ಆಗ ಶಬ್ದ ಕೇಳಿದ ಅಕ್ಕಪಕ್ಕದ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿದ್ದು, ಈ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಭಾಗದಲ್ಲಿ ಹೊರ ರಾಜ್ಯದ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದು, ಘಟನೆಯಲ್ಲಿ ಅವರ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ಶುರುವಾಗಿದೆ. ಶ್ವಾನದಳ, ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಆದಷ್ಟು ಶೀಘ್ರವಾಗಿ ಕಳ್ಳರನ್ನು ಬಂಧಿಸುವ ಇಂಗಿತವನ್ನು ಇಲಾಖೆ ವ್ಯಕ್ತಪಡಿಸಿದೆ.

RELATED ARTICLES  ನಾಳೆ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಚಕ್ರವರ್ತಿ ಸೂಲಿಬೆಲೆ ಅವರಿಂದ ಉಪನ್ಯಾಸ.