ದಾಂಡೇಲಿ : ಕರ್ನಾಟಕ ಕೊಂಕಣಿ ಅಕಾಡೆಮಿಯಿಂದ ಹಿಂದೆ ನಡೆಸಲ್ಪಡುತ್ತಿದ್ದ ಕೊಂಕಣಿ ಮೊಬೈಲ್ ಬಜಾರ್ ಪುನರಾರಂಭಗೊಂಡಿದ್ದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್‍ರವರು ಕೊಂಕಣಿ ಅಕಾಡೆಮಿಯ ಆವರಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

RELATED ARTICLES  ಶ್ರೀಕ್ಷೇತ್ರ ಗೋಕರ್ಣದಲ್ಲಿ ನಿತ್ಯ- ನಿರಂತರ ಕಲಾಸೇವೆ

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅಕಾಡೆಮಿಯ ಅಧ್ಯಕ್ಷ ಆರ್.ಪಿ. ನಾಯ್ಕರವರು ಈ ಯೋಜನೆಯನ್ನು ಅಕಾಡೆಮಿಯಿಂದ ಮುಂದುವರೆಸಲು ತನಗೆ ಸಂತೋಷವಾಗುತ್ತಿದೆ ಎಂದರು. ಕೊಂಕಣಿ ಭಾಷೆಯನ್ನು ಸದೃಢಗೊಳಿಸುವುದರ ಜೊತೆಗೆ ಕೊಂಕಣಿಗರ ಸಂಸ್ಕøತಿ, ಆಚಾರ-ವಿಚಾರಗಳ ರಕ್ಷಣೆಗೂ ಅಕಾಡೆಮಿ ಮುಂದಡಿಯಿಡಲಿದೆ ಎಂದರು.

RELATED ARTICLES  ಅಂಗನವಾಡಿ ಕೇಂದ್ರ ಉದ್ಘಾಟಿಸಿದ ಶಾಸಕಿ ಶಾರದಾ ಮೋಹನ ಶೆಟ್ಟಿ

ಈ ಕೊಂಕಣಿ ಮೊಬೈಲ್ ಬಜಾರ್ ಯೋಜನೆಯನ್ನು ಪ್ರಾರಂಭಗೊಳಿಸಿದ್ದ ಅಕಾಡೆಮಿಯ ಮಾಜಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಶುಭ ಹಾರೈಸಿ ಮಾತನಾಡಿದರು. ಅಕಾಡೆಮಿಯ ಸದಸ್ಯರಾದ ಲಕ್ಷ್ಮಣ ಪ್ರಭು ಕುಂಬ್ಳೆ, ದಾಮೋದರ ಬಂಡರ್ಕರ್ ಪುತ್ತೂರು, ರಿಜಿಸ್ಟ್ರಾರ್ ಡಾ.ಬಿ.ದೇವದಾಸ ಪೈ, ಉಪಸ್ಥಿತರಿದ್ದರು.