ಕುಮಟಾ : ಗ್ರಾಮಾಂತರ ಪ್ರದೇಶಗಳಿರಲಿ,ಪಟ್ಟಣಗಳಿರಲಿ ಅವುಗಳ ಸಮೀಪ ಇರುವ ಜಲಾನಯನ ಪ್ರದೇಶಗಳಲ್ಲಿ ನೀರನ್ನು ಶೇಖರಿಸಬಹುದಾಗಿದ್ದು ಈ ತರಹ ಶೇಖರಿಸಿದ ನೀರು ಸ್ಥಳೀಯ ಅಗತ್ಯತೆಗಳನ್ನು ಪೂರೈಸಲು ಅನುಕೂಲವಾಗುತ್ತದೆ.ಈ ದಿಸೆಯಲ್ಲಿ ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣಕ್ಕೆ ನಾವು ಆದ್ಯತೆ ಕೊಡಬೇಕಾಗಿದೆ ಎಂದು ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲೊಜಿ ಬಂಟಕಳ ಉಡುಪಿ ದ.ಕ.ಇದರ ಸಿವಿಲ್ ಇಂಜನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಸಂದೀಪ ಜೆ.ನಾಯಕ ನುಡಿದರು.

ಅವರು ಕುಮಟಾ ತಾಲೂಕಾ ಸಿವಿಲ್ ಇಂಜನಿಯರ್ಸ ಅಸೋಸಿಯೇಶನ್ ವತಿಯಿಂದ ನಾದಶ್ರೀ ಕಲಾಕೇಂದ್ರದಲ್ಲಿ ಭಾರತ ರತ್ನ ಸರ್ ಎಮ್.ವಿಶ್ವೇಶ್ವರಯ್ಯ ಅವರ 162 ನೇ ಜನ್ಮ ದಿನೋತ್ಸವ ದ ಪ್ರಯುಕ್ತ ಹಮ್ಮಿಕೊಂಡ “ಇಂಜನಿಯರ್ಸ್ ಡೇ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭೂ ಅಂತರ್ಜಲ ಕುರಿತಾಗಿ ಉಪನ್ಯಾಸ ನೀಡಿದರು.ಅಂತರ್ಜಲದ ಮಹತ್ವ,ಅಂತರ್ಜಲವನ್ನು ರಕ್ಷಿಸಿ ಹೆಚ್ಚಿಸುವ ವಿಧಾನಗಳ ಕುರಿತು ವಿವರಿಸಿ, ಮುಂದಿನ ಜನಾಂಗಕ್ಕೂ ಶುದ್ಧ ನೀರು ಸಿಗುವಂತೆ ಅಂತರ್ಜಲ ಮಟ್ಟವನ್ನು ಉಳಿಸಿ ಹೆಚ್ಚಿಸುವ ಜವಾಬ್ದಾರಿ ಎಲ್ಲರದ್ದಾಗಿದ್ದು ಎಲ್ಲರೂ ಪ್ರಾಮಾಣಿಕವಾಗಿ ಈ ದಿಸೆಯಲ್ಲಿ ಕಾರ್ಯಪ್ರವರ್ತರಾಗುವಂತೆ ಕರೆ ನೀಡಿದರು.

ಭಾರತ ರತ್ನ ಸರ್ ಎಮ್.ವಿಶ್ವೇಶ್ವರಯ್ಯ ಅವರ ಜೀವನ ಚರಿತ್ರೆ ಕುರಿತು ಇಂ.ಪ್ರವೀಣ ಆಚಾರ್ಯ ವಿವರಿಸಿದರು.

RELATED ARTICLES  ಹೊನ್ನಾವರ ಬಾಳೆಗದ್ದೆ ವೆಂಕಟ್ರಮಣ ದೇವರ ವರ್ಧಂತಿ ಉತ್ಸವ ಫೆ.7 ಕ್ಕೆ

ಈ ಸಂದರ್ಭದಲ್ಲಿ ಅಸೋಸಿಯೇಶನ್ ವತಿಯಿಂದ ಮುಖ್ಯ ಅತಿಥಿ ಡಾ.ಸಂದೀಪ ಜೆ.ನಾಯಕ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಸೋಸಿಯೇಶನ್ ಅಧ್ಯಕ್ಷ ಇಂ.ಲಕ್ಷ್ಮೀನಾರಾಯಣ ಎಚ್.ನಾಯಕ ಸ್ವಾಗತಿಸಿದರು. ಸಂಸ್ಥಾಪಕ ಅಧ್ಯಕ್ಷ ಇಂ.ಎಚ್.ಎನ್.ನಾಯ್ಕ ಅತಿಥಿಗಳನ್ನು ಪರಿಚಯಿಸಿದರು. ಡಾಲ್ಮಿಯ ಸಿಮೆಂಟ್ ಡೀಲರ್ ಆರ್.ವಿ.ನಾಯಕ ರವರ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಇಂ.ವೈಕುಂಠ ಪ್ರಭು ನಿರೂಪಿಸಿದರು.ಕಾರ್ಯದರ್ಶಿ ಇಂ.ಗಣೇಶ ಉಪ್ಪಾರ ವಂದಿಸಿದರು.

RELATED ARTICLES  ಮತ್ತೆ ಸದ್ದು ಮಾಡಿದ ಅಕ್ರಮ ಜಾನುವಾರು ಸಾಗಾಟ ಪ್ರಕರಣ.

-jb