ಕುಮಟಾ : ಧಾರವಾಡದ ರಂಗಾಯಣದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿಗಳ ಪ್ರದಾನ ಸಮಾರಂಭ
ಸೆ 22ರಂದು ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಸನ್ಮಾನ ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳ ನ್ನು ಪ್ರದಾನ ಮಾಡಲಾಯಿತು.
ವಿಶ್ವದರ್ಶನ ಕನ್ನಡ ದಿನಪತ್ರಿಕೆಯ ಪ್ರಥಮ ವರ್ಷದ ಸಮ್ಮೇಳನದ ಅಂಗವಾಗಿ ಕರ್ನಾಟಕ ಪ್ರಜಾ ದರ್ಶನ ಕನ್ನಡ ಮಾಸ ಪತ್ರಿಕೆಯ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದಲ್ಲಿ “ವಿಶ್ವ ಮಾಧ್ಯಮ ರತ್ನ” ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಜಯಶಾಲಿ ವಾರ ಪತ್ರಿಕೆಯ ಸಂಪಾದಕ, ಕುಮಟಾ ಕನ್ನಡ ಸಂಘದ ಸಂಸ್ಥಾಪಕ ಅಧ್ಯಕ್ಷ ಸದಾನಂದ ದೇಶಭಂಡಾರಿ ಪತ್ರಿಕಾ ರಂಗದಲ್ಲಿ ಸುಮಾರ 15 ವರ್ಷಗಳ ಸೇವೆ ಸಲ್ಲಿಸಿದ್ದೇನೆ ಹಾಗೂ ಕಳೆದ 8 ತಿಂಗಳ ಹಿಂದೆ ಕುಮಟಾ ಕನ್ನಡ ಸಂಘ ರಚಿಸಿ, ಕನ್ನಡ ನಾಡು-ನುಡಿಗಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಸೇವೆಯನ್ನು ಪರಿಗಣಿಸಿ ನೀಡಿರುವ ಈ ಪ್ರಶಸ್ತಿ ಕುಮಟಾ ಕನ್ನಡ ಸಂಘದ ಎಲ್ಲಾ ಸದಸ್ಯರಿಗೆ ಸಲ್ಲಬೇಕು. ಇಂತಹ ಪ್ರಶಸ್ತಿಗಳು ಬಂದಾಗ ಪತ್ರಕರ್ತರ ಜವಾಬ್ದಾರಿ ಇನ್ನಷ್ಟು ಹೆಚ್ಚಾಗುತ್ತದೆ. ಸಮಾಜದ ಒಳಿತಿಗಾಗಿ ಇನ್ನಷ್ಟು ಸೇವೆ ಮಾಡಲಾಗುವುದು. ಪ್ರಶಸ್ತಿ ನೀಡಿದ ವಿಶ್ವದರ್ಶನ ಪತ್ರಿಕೆಯ ಪ್ರಧಾನ ಸಂಪಾದಕರಾದ ಎಸ್ ಎಸ್ ಪಾಟೀಲ್ ಹಾಗೂ ಅವರ ಪತ್ರಿಕಾ ಬಳಗಕ್ಕೆ ಧನ್ಯವಾದಗಳು ಎಂದರು.
ಈ ಸಂದರ್ಭದಲ್ಲಿ ಪ.ಪೂ.ಡಾ.ಶ್ರೀ ಕಾಲಜ್ಞಾನ ಬ್ರಹ್ಮ ಸದ್ಗುರು ಶರಣಬಸವ ಮಹಾಸ್ವಾಮಿಗಳು, ಪ.ಪೂ.ಶ್ರೀ ವೀರಯ್ಯ ಮಹಾಸ್ವಾಮಿಗಳು,ಪ.ಪೂ.ಶ್ರೀ 108 ಷ.ಬ್ರ.ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು, ಪ.ಪೂ.ಶ್ರೀ ವಿದ್ಯಾನಂದ ಮಹಾಸ್ವಾಮಿಗಳು, ಪ.ಪೂ.ಶ್ರೀ ಶಿವಅಂಗಾನಂದ ಮಹಾಸ್ವಾಮಿಗಳು,ಪ.ಪೂ.ಶ್ರೀ ಹಾಲಯ್ಯ ಮಹಾಸ್ವಾಮಿಗಳು, ಪ.ಪೂ.ವೇ.ಮೂರ್ತಿ ವಿನೋದಯ್ಯ ಮಹಾಸ್ವಾಮಿಗಳು, ಶ್ರೀ ವೇ.ಬ್ರ.ಪಂ. ರವಿಕುಮಾರ ಸ್ವಾಮಿಗಳು,ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ಅರಳಿ ನಾಗರಾಜ, ಹಿರಿಯ ಪತ್ರಕರ್ತರಾದ ಎಸ್ ಎಲ್ ಶಾಸ್ತ್ರಿ,, ವಿಶ್ವದರ್ಶನ ಪತ್ರಿಕೆಯ ಸಂಪಾದಕ ಎಸ್ ಎಸ್ ಪಾಟೀಲ್ ಇನ್ನಿತರರು ಉಪಸ್ಥಿತರಿದ್ದರು.