ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿದ್ದು, ಹೆಬ್ಬಾವುಗಳು ಹಾಗೂ ಕಾಳಿಂಗ ಸರ್ಪಗಳು ಕಾಣಿಸಿಕೊಂಡು ಜನತೆಗೆ ಭಯ ಉಂಟಾಗುವಂತೆ ಮಾಡುತ್ತಿದೆ. ಇದೀಗ ಮತ್ತೆ 11 ಅಡಿ ಉದ್ದದ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟು ಬಂದ ಘಟನೆ ಪಟ್ಟಣದ ಪುರಲಕ್ಕಿ ಬೇಣದಲ್ಲಿ ನಡೆದಿದೆ. ಪುರಲಕ್ಕಿ ಬೇಣದ ಸುಜಾತ ನಾಯಕ್ ಎನ್ನುವವರ ಕಾಂಪೌಂಡ್ ಒಳಗೆ ಹೆಬ್ಬಾವು ಬಂದಿತ್ತು. ಹೆಬ್ಬಾವನ್ನು ನೋಡಿದ ಸುಜಾತ ನಾಯ್ಕ ಒಮ್ಮೆ ಹೌಹಾರಿದ್ದಾರೆ.

RELATED ARTICLES  ಬೈಕ್ ಕಳುವು ಮಾಡಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು.

ನಂತರ ಅವರು ಉರಗ ತಜ್ಞ ಸಾಮುವೆಲ್ ಅವರಿಗೆ ಮಾಹಿತಿ ನೀಡಿದ್ದು, ಅವರು ಅವರ ತಂದೆಯೊಂದಿಗೆ ಬಂದು ಹೆಬ್ಬಾವನ್ನ ಹಿಡಿದು ಸುರಕ್ಷಿತವಾಗಿ ಅರಣ್ಯ ಇಲಾಖೆಗೆ ನೀಡಿದ್ದಾರೆ. ವಲಯ ಅರಣ್ಯ ಅಧಿಕಾರಿ ಜಿ.ವಿ ನಾಯಕ ಮತ್ತು ಸಿಬ್ಬಂದಿಗಳು ಸುರಕ್ಷಿತವಾಗಿ ಹಾವನ್ನು ಕಾಡಿನಲ್ಲಿ ಬಿಟ್ಟಿದ್ದಾರೆ.

RELATED ARTICLES  ಕೆಲಸಕ್ಕೆ ಹೋಗಿಬರುತ್ತೇನೆಂದು ತೆರಳಿದ ಯುವತಿ ನಾಪತ್ತೆ.