ಸಿದ್ದಾಪುರ: ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ ಕಾಡುಕೋಣವನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸಿದ್ದಾಪುರ ತಾಲೂಕಿನ ಹೆಗ್ಗೆಕೊಪ್ಪ ಗ್ರಾಮದ ನೆಲ್ಲಿಕೊಪ್ಪ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಾಡುಕೋಣವೊಂದು ಗಾಯಗೊಂಡು ನಿತ್ರಾಣವಾಗಿ ಅಸಹಾಯಕ ಸ್ಥಿತಿಯಲ್ಲಿ ಬಿದ್ದುಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ – ವಿದ್ಯಾರ್ಥಿಗಳು ಇದ್ದ ಕಾರು ಅಪಘಾತ : ಓರ್ವ ಸಾವು : ಮೂವರಿಗೆ ಪೆಟ್ಟು

RELATED ARTICLES  ಆಸ್ಪತ್ರೆಗೆ ತೆರಳಲು ನಿಂತವರ ಮೇಲೆಯೇ ಹರಿದ ಬೈಕ್ : ಮೂವರು ಮಕ್ಕಳ ಸಹಿತ ಐವರು ಗಂಭೀರ

ಈ ಸಮಯದಲ್ಲಿ ಶಿವಮೊಗ್ಗ ವನ್ಯಜೀವಿ ವಿಭಾಗದ ವೈದ್ಯ ಡಾ. ಮುರಳಿ ಮನೋಹರ, ಡಾ. ವಿನಯ ಅವರು ಸ್ಥಳಕ್ಕೆ ಆಗಮಿಸಿ ಕಾಡುಕೋಣಕ್ಕೆ ಸೂಕ್ತ ಚಿಕಿತ್ಸೆ ನೀಡಿದ್ದಾರೆ.
ನಂತರ ಅರಣ್ಯ ಇಲಾಖೆ ಸಿಬ್ಬಂದಿ ಸಹಾಯದೊಂದಿಗೆ ಕಾಡುಕೋಣವನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕಾಡುಕೋಣಕ್ಕೆ ಚಿಕಿತ್ಸೆ ನೀಡಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಕಾರ್ಯಾಚರಣೆಯಲ್ಲಿ ಡಾ. ಅಜ್ಜಯ್ಯ, ಎಸಿಎಫ್ ಹರೀಶ್, ಪಶು ಇಲಾಖೆಯ ಡಾ. ವಿವೇಕ್ ಹೆಗಡೆ ಮತ್ತು ವಲಯ ಅರಣ್ಯ ಅಧಿಕಾರಿ ಬಸವರಾಜ್ ಸೇರಿದಂತೆ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

RELATED ARTICLES  ಶ್ರೀವೀರಾಂಜನೇಯ ಪ್ರತಿಷ್ಠಾನದ ಎರಡನೇ ವರ್ಷದ “ವೀರಾಂಜನೇಯ ಪುರಸ್ಕಾರ" ಪ್ರದಾನ