ಭಟ್ಕಳ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸಾವನ್ನಿಪ್ಪಿದ್ದು ಮೂವರು ಗಾಯಗೊಂಡಿರುವ ಭೀಕರ ಅಪಘಾತದ ಘಟನೆ ತಾಲೂಕಿನ ಬೈಪಾಸ್ ಸಮೀಪ ನಡೆದಿರುವ ಬಗ್ಗೆ ವರದಿಯಾಗಿದೆ. ಕಾರು ಅತೀ ವೇಗವಾಗಿ ಬಂದ ಕಾರಣದಿಂದ ಈ ಅಪಘಾತ ಸಂಭವಿಸಿರುವ ಬಗ್ಗೆ ಸ್ಥಳೀಯ ಮಾಹಿತಿ ಲಭ್ಯವಾಗಿದೆ.

ಮೃತ ವ್ಯಕ್ತಿ ಎಂಜನೀಯರಿಂಗ್ ವಿದ್ಯಾರ್ಥಿ ರಂಗಿನಕಟ್ಟೆ ನಿವಾಸಿ ಉನೈಜ್‌ ಹಮ್ಜದ ಖತೀಬ್ ಎಂದು ತಿಳಿದು ಬಂದಿದೆ. ಈತ ತನ್ನ ಮೂವರು ಸ್ನೇಹಿತರೊಂದಿಗೆ ಕಾರಿನಲ್ಲಿ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿದೆ. ಘಟನೆಯಲ್ಲಿ ಕಾರು ಚಾಲಕ ಸಾವನಪ್ಪಿದ್ದು ಮೂವರು ಗಂಭೀರ ಗಾಯಗೊಂಡಿದ್ದಾರೆ.

ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನ ಎರಡು ಚಕ್ರಗಳು ನೂರು ಮೀಟರ್ ದೂರಕ್ಕೆ ಹೋಗಿಬಿದ್ದಿದೆ. ಅಲ್ಲದೇ ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು ಹಾರಿ ರಸ್ತೆಯ ಫಲಕವೊಂದಕ್ಕೆ ಡಿಕ್ಕಿಯಾದ ಪರಿಣಾಮ ಫಲಕ ಕೂಡ ನೆಲಕ್ಕುರುಳಿದೆ.

RELATED ARTICLES  ಯಶೋಧರಾ ನಾಯ್ಕ ಟ್ರಸ್ಟ ವತಿಯಿಂದ‌ ಸಹಾಯ ಸಂಘಗಳಿಗೆ ಸಾಲ ವಿತರಣೆ ಹಾಗೂ ಹೊಲಿಗೆ ತರಬೇತಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ .

ಇದನ್ನೂ ಓದಿ – ರಸ್ತೆ ಬದಿಯಲ್ಲಿ ಬಿದ್ದು ಸಾರ್ವಜನಿಕರ ಮೂಲಕ ಆಸ್ಪತ್ರೆ ಸೇರಿದ್ದ ವ್ಯಕ್ತಿ ಸಾವು : ಪರಿಚಯ ಇದ್ದರೆ ಮಾಹಿತಿ ನೀಡಿ.

RELATED ARTICLES  ಒಳಿತು ಒಳಿತನ್ನೇ ಆಕರ್ಷಿಸುತ್ತದೆ: ರಾಘವೇಶ್ವರ ಶ್ರೀ

ಅಪಘಾತದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಿಂದಾಗಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯ ಜನರು ಹಾಗೂ ಪೊಲೀಸ್ ಅಧಿಕಾರಿಗಳು ಅಗತ್ಯ ಪ್ರಕ್ರಿಯೆ ಕೈಗೊಂಡರು ಎನ್ನಲಾಗಿದೆ.

ಉತ್ತರಕನ್ನಡದ ಇತರ ಸುದ್ದಿಗಳಿಗಾಗಿ ಈ ಲಿಂಕ್ ಒತ್ತಿ – https://satwadhara.news/category/local-news-uttara-kannada/