ದಾಂಡೇಲಿ : ನಗರದ ನಿರ್ಮಲ ನಗರದಲ್ಲಿರುವ ತನ್ನ ಮನೆಯಲ್ಲಿ ಅಂಬೇವಾಡಿಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಯೋರ್ವ ನೇಣಿಗೆ ಶರಣಾದ ಘಟನೆ ನಡೆದಿದೆ. ನಿರ್ಮಲನಗರದ ನಿವಾಸಿ ಹಾಗೂ ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಬಾರೆ ಇಮಾಮ್ ಚಪ್ಪರಬಂದ್ ಎಂಬವರ ಪುತ್ರನಾದ 16 ವರ್ಷದ ಅಬ್ದುಲ್ ರೆಹಮಾನ್ ಬಾರೆ ಇಮಾಮ್ ಚಪ್ಪರಬಂದ್ ಎಂಬಾತನೇ ನೇಣಿಗೆ ಕೊರೊಳೊಡ್ಡಿದ್ದ ಬಾಲಕನಾಗಿದ್ದಾನೆ ಎಂದು ಸ್ಥಳೀಯ ಪತ್ರಿಕೆ ವರದಿಮಾಡಿದೆ.

RELATED ARTICLES  ಸದಾಶಿವಗಡದ ಐತಿಹಾಸಿಕ ಗುಡ್ಡಕ್ಕೆ ಬೆಂಕಿ..!

ಈತ ಅಂಬೇವಾಡಿಯಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಈತ ತಾಯಿಯನ್ನು ನೋಡಬೇಕೆಂದು ಬಯಸಿದ್ದರಿಂದ ಬುಧವಾರ ತಂದೆಯವರ ಜೊತೆ ನಿರ್ಮಲನಗರದ ತನ್ನ ಮನೆಗೆ ಬಂದಿದ್ದನು ಎನ್ನಲಾಗಿದೆ. ಆದರೆ ಸಂಜೆ ಮನೆಯಲ್ಲಿ ಯಾರೂ ಇಲ್ಲದಿದ್ದ ಸಮಯದಲ್ಲಿ ನೇಣಿಗೆ ಶರಣಾಗಿದ್ದಾನೆ.

ಮೃತ ಬಾಲಕನ ತಂದೆ ಬಾರೆ ಇಮಾಮ್ ಚಪ್ಪರಬಂದ್ ಅವರು ಮಾಧ್ಯಮಕ್ಕೆ ನೀಡಿದ ಹೇಳಿಕೆಯ ಪ್ರಕಾರ ನನ್ನ ಮಗನ ಆತ್ಮಹತ್ಯೆಗೆ ರ್ಯಾಗಿಂಗ್ ಕಾರಣವೇ ಹೊರತು, ಬೇರೆ ಯಾವುದೇ ಕಾರಣವಿಲ್ಲ ಎಂದಿದ್ದಾರೆ. ಇನ್ನೂ ಆತ್ಮಹತ್ಯೆಯ ಕುರಿತಂತೆ ಬಾಲಕ ರ್ಯಾಗಿಂಗ್‌ಗೆ ಹೆದರಿ ಆತ್ಮಹತ್ಯೆ ಮಾಡಿರಬಹುದೇ, ಅಥವಾ ಪರೀಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿರಬಹುದೇ ಅಥವಾ ಇನ್ಯಾವುದೇ ಕಾರಣಕ್ಕೆ ಆತ್ಮಹತ್ಯೆ ಮಾಡಿರಬಹುದೇ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದುಬರಲಿದೆ. ಸ್ಥಳಕ್ಕೆ ಪಿಎಸೈ ಕಿರಣ್ ಪಾಟೀಲ ನೇತೃತ್ವದಲ್ಲಿ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

RELATED ARTICLES  ಅಲ್ಗಾರಿದಮ್ ಫೋಟೋಗಳಿಂದ ವಾಟರ್ ಮಾರ್ಕ್ ಗಳನ್ನು ತನ್ನಷ್ಟಕ್ಕೆ ಅಳಿಸಿಹಾಕುತ್ತದೆ