ಭಟ್ಕಳ: ಗುಳ್ಮಿ ಕ್ರಾಸ್ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಡಿವೈಎಸ್ಪಿ ನೇತೃತ್ವದದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿ ಹೆಬಳೆ ನಿವಾಸಿ ಸಯ್ಯದ್ ಮುಸಾ ಸಯ್ಯದ್ ಅಹ್ಮದ್ ತಲಾಹಸ್ಟ್ರೀಟ್ ಹನಿಫಾಬಾದ್ ಎಂದು ತಿಳಿದು ಬಂದಿದೆ.

RELATED ARTICLES  ಗೋಕರ್ಣದ ಓಂ ಬೀಚ್ ಕಡಲ ತೀರದಲ್ಲಿ ಪ್ರವಾಸಿಗ ಸಾವು

ಈತ ಅಕ್ರಮವಾಗಿ ಒಟ್ಟು ಸುಮಾರು 2,500 ರೂಪಾಯಿ ಬೆಲೆಬಾಳುವ 209 ಗ್ರಾಂ ತೂಕದ ಒಣಗಿದ ಗಾಂಜಾವನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಬಂಧಿತನಿಂದ ನಗದು 200 ರೂಪಾಯಿ ಸಮೇತ ಆರೋಪಿಯನ್ನು ಬಂಧಿಸಲಾಗಿದೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.