ಕುಮಟಾ : ಪೊಲೀಸ್ ಠಾಣಾ ಗುನ್ನಾ ನಂಬರ 201/2022 ಕಲಂ 8(C) 20 (B) (ii) (A) NDPS ACT 1989 ಅಡಿಯಲ್ಲಿ ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಾಂಜಾ ಸಾಗಾಟ/ ಮಾರಾಟ ಪ್ರಕರಣದ ಬಗ್ಗೆ ಪತ್ತೆಗಾಗಿ ಉತ್ತರ ಕನ್ನಡ ಜಿಲ್ಲಾ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಸುಮನ್ ಪೆನ್ನೆಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ರೀ ಎಸ್ ಭದರಿನಾಥ್ ಹಾಗೂ ಭಟ್ಕಳ ಉಪವಿಭಾಗದ ಡಿ.ವೈ.ಎಸ್.ಪಿ ಶ್ರೀ ಬೆಳ್ಳಿಯಪ್ಪ ರವರುಗಳ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿಯ ಮೇರೆಗೆ ಕುಮಟಾದ ರೇಲ್ವೆ ಸ್ಟೇಷನ್ ಹೋಗುವ ದಾರಿಯಲ್ಲಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವಾಗ ಸುಮಾರು 40000/- ರೂ ಮೌಲ್ಯದ 1 ಕೆ.ಜಿ. 500 ಗ್ರಾಂ ತೂಕದ ಗಾಂಜಾ ಮಾಧಕ ಪದಾರ್ಥವನ್ನು ಮತ್ತು ಕೃತ್ಯಕ್ಕೆ ಬಳಸಿದ ಮೋಟಾರು ಸ್ಕೂಟಿಯನ್ನು ವಶಪಡಿಸಿಕೊಳ್ಳಲಾಗಿದೆ.
ಶ್ರೀ ತಿಮ್ಮಪ್ಪ ನಾಯ್ಕ ಪಿ.ಐ ಕುಮಟಾ ಹಾಗೂ ಶ್ರೀ ನವೀನ್ ನಾಯ್ಕ ಪಿ.ಎಸ್.ಐ ( ಕಾ.ಸೂ) ಕುಮಟಾ ರವರನ್ನೊಳಗೊಂಡ ತಂಡ ದಾಳ ಮಾಡಿ ಆರೋಪಿತನಾದ ರಾಕೇಶಕುಮಾರ ದಾಸ್ ತಂದೆ ಪ್ರವಾಕರ ದಾಸ ಪ್ರಾಯ 33 ವರ್ಷ ಸಾ|| ಮರಿ, ಓರಿಸ್ಸಾ ಹಾಲಿ ವೆರ್ನಾ ಗೋವಾ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಇದನ್ನೂ ಓದಿ – ನಗ್ನವಾಗಿ ಓಡಾಡಿ ಮುಜುಗರ ಉಂಟುಮಾಡುತ್ತಿದ್ದ ಮಾನಸಿಕ ಅಸ್ವಸ್ಥ : ಮಾನವೀಯತೆ ಮೆರೆದ ಪೊಲೀಸರು.
ಈ ಕಾರ್ಯಾಚರಣೆಯಲ್ಲಿ ಶ್ರೀ ರವಿ ಗುಡ್ಡಿ ಪಿ.ಎಸ್.ಐ, ಶ್ರೀಮತಿ ಪದ್ಮಾ ದೇವಳ ಪಿ.ಎಸ್.ಐ, ಶ್ರೀಮತಿ ಚಂದ್ರಮತಿ ಪಟಗಾರ ಪಿ.ಎಸ್.ಐ, ಹಾಗೂ ಸಿಬ್ಬಂಧಿಗಳಾದ ಸಿ.ಹೆಚ್.ಸಿ,
ಗಣೇಶ ನಾಯ್ಕ, ದಯಾನಂದ ನಾಯ್ಕ . ರಾಜು ನಾಯ್ಕ,
ಆಸೀಫ್ ಆರ್, ಗುರು ನಾಯಕ , ಶಿವಾನಂದ ಜಾಡರ್ , ಮಂಜುನಾಥ , ಪ್ರದೀಪ್ ನಾಯಕ , ಧನಂಜಯ ಪಟಗಾರ, ಸಂಜೀವ ನಾಯ್ಕ ರವರು ಭಾಗವಹಿಸಿದ್ದು ಮಾನ್ಯ ಪೊಲೀಸ್ ಅಧೀಕ್ಷಕರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಹಾಗೂ ಸಿಬ್ಬಂಧಿಗಳಿಗೆ ಅಭಿನಂದಿಸಿ ಸೂಕ್ತ ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.
ಇಂದಿನ Special News ಗಳಿಗಾಗಿ ಈ ಲಿಂಕ್ ಒತ್ತಿ.
https://satwadhara.news/category/special-news/