ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 1ರಂದು ದೇಶದಲ್ಲಿ 5ಜಿ ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ಸಂವಹನ ಸಚಿವಾಲಯದ ನ್ಯಾಷನಲ್ ಬ್ರಾಡ್ ಬ್ಯಾಂಡ್ ಮಿಷನ್ ಶನಿವಾರ ಟ್ವೀಟ್ ಮಾಡಿದೆ. ಭಾರತದ ಡಿಜಿಟಲ್ ವ್ಯವಸ್ಥೆ ಮತ್ತು ಸಂವಹನ, ಸಂಪರ್ಕವನ್ನು ಅತ್ಯಾಧುನಿಕ ಸೌಲಭ್ಯದತ್ತ ಪ್ರಧಾನಿ ನರೇಂದ್ರ ಮೋದಿ ಅವರು ಕೊಂಡೊಯ್ಯುವ ನಿಟ್ಟಿನಲ್ಲಿ 5ಜಿ ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದೆ.
ಆದರೆ ಎನ್ ಬಿಎಂ (ನ್ಯಾಷನಲ್ ಬ್ರಾಡ್ ಬ್ಯಾಂಡ್ ಮಿಷನ್) ಟ್ವೀಟ್ ಕೆಲವೇ ಹೊತ್ತಿನಲ್ಲಿ ಡಿಲೀಟ್ ಮಾಡಿದೆ ಎಂದು ವರದಿ ವಿವರಿಸಿದೆ. ಇಂಡಸ್ಟ್ರಿ ಮಾಹಿತಿ ಪ್ರಕಾರ, ಭಾರತದಲ್ಲಿ 5 ಜಿ ಸೇವೆಯನ್ನು ಆರಂಭಿಸಲು ಸಿದ್ಧತೆ ನಡೆದಿಲ್ಲ. ನೂತನ ತಂತ್ರಜ್ಞಾನಕ್ಕೆ ವಿಧ್ಯುಕ್ತ ಚಾಲನೆ ನೀಡಲು ಇನ್ನೂ ಕೆಲವು ದಿನಗಳ ಕಾಲಾವಕಾಶ ಬೇಕಾಗಿದೆ ಎಂದು ತಿಳಿಸಿದೆ.
ಕೆಲವು ಪ್ರಮುಖ ಮಾಹಿತಿ ಇಲ್ಲಿದೆ.
4G ನೆಟ್‌ವರ್ಕ್ ಮುಂದುವರಿಯುತ್ತದೆ.
ಉದ್ಯಮದ ಅಂದಾಜಿನ ಪ್ರಕಾರ, ಭಾರತದಲ್ಲಿ ಪ್ರಸ್ತುತ ಸುಮಾರು 50 ಮಿಲಿಯನ್ 5G ಸಾಧನಗಳಿವೆ. ಈ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ.
5G ಫೋನ್‌ಗಳ ಹಲವು ಮಾದರಿಗಳು ಸುಲಭವಾಗಿ ಲಭ್ಯವಿವೆ. ಆಪಲ್ ಐಫೋನ್, ಸ್ಯಾಮ್‌ಸಂಗ್, ಒನ್‌ಪ್ಲಸ್ ಇತ್ಯಾದಿ ಪ್ರಮುಖ ಬ್ರ್ಯಾಂಡ್‌ಗಳ ಸಾಧನಗಳು 5G ಫೋನ್‌ಗಳನ್ನು ಮಾರಾಟ ಮಾಡುತ್ತಿವೆ.
ಈಗಾಗಲೆ ರಿಲಯನ್ಸ್ ಘೋಷಿಸಿರುವಂತೆ, ಜಿಯೋ ಏರ್ ಫೈಬರ್ ಸಾಧನವನ್ನು ಜಿಯೋ ಹೊರತರಲಿದೆ. ಇದು ಪೋರ್ಟಬಲ್ 5G ಸಾಧನವಾಗಿದೆ.
ಇಲ್ಲ, ಪ್ರಸ್ತುತ 4G ಫೋನ್‌ಗಳನ್ನು 5G ಗೆ ಅಪ್‌ಗ್ರೇಡ್ ಮಾಡಲು ಸಾಧ್ಯವಿಲ್ಲ.
5G ಹೆಚ್ಚಿನ ವೇಗ ಮತ್ತು ಕಡಿಮೆ ಲೇಟೆನ್ಸಿಯ ವಿಶಿಷ್ಟ ಪ್ರಯೋಜನವನ್ನು ಹೊಂದಿದೆ. ಇದು ಡಿಜಿಟಲ್ ಗ್ರಾಹಕರು ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ಬಳಸಲು ಸಹಾಯ ಮಾಡುತ್ತದೆ.