ಕುಮಟಾ: ‘ಕುಮಾರವ್ಯಾಸ ಕನ್ನಡದ ಮೇರು ಪ್ರತಿಭೆ, ಅವರ ಸಾಹಿತ್ಯ ಕಲಿಯದವರ ಕಾಮಧೇನು ಇದ್ದಂತೆ. ಅದು ಸರ್ವಕಾಲಿಕ’ ಎಂದು ಉಪನ್ಯಾಸಕಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ವನ್ನಳ್ಳಿ ಗಿರಿ ಹೇಳಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತು ಕುಮಟಾ ಘಟಕದ ಆಶ್ರಯದಲ್ಲಿ ರಾಮನಾಥ ಪ್ರೌಢ ಶಾಲೆ ಊರುಕೇರಿಯಲ್ಲಿ ಏರ್ಪಡಿಸಿದ ಗಮಕ ವಾಚನ ಕಾರ್ಯಕ್ರಮದಲ್ಲಿ ಕುಮಾರ ವ್ಯಾಸನ ವಿರಾಟಪರ್ವದ ಮೂರನೆಯ ಅಧ್ಯಾಯವನ್ನು ಸುಶ್ರಾವ್ಯ ಶೈಲಿಯಿಂದ ಗಮಕ ವಾಚನ ಮಾಡಿ ಸಮಗ್ರ ವಿವರಣೆ ನೀಡಿದರು.
ರಾಮನಾಥ ಪ್ರೌಢ ಶಾಲೆಉ ಮಕ್ಕಳು ನಾಡ ಗೀತೆ ಹಾಡಿದರು. ಕೃಷ್ಣ ಮೊಗೇರ್ ಸ್ವಾಗತಿಸಿದರು. ಮುಖ್ಯಾಧ್ಯಾಪಕ ಎಸ್. ಜಿ. ಭಟ್ ಕಾರ್ಯಕ್ರಮ ಉದ್ಘಾಟನೆ ಮಾಡಿ ‘ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮ ನಡೆಯುವುದು ನಮ್ಮ ಸೌಭಾಗ್ಯ’ ಎಂದು ಸಾಹಿತ್ಯ ಪರಿಷತ್‌ಗೆ ಅಭಿನಂದನೆ ಸಲ್ಲಿಸಿದರು. ಅಧ್ಯಕ್ಷತೆ ವಹಿಸಿದ್ದ ತಾ.ಕ.ಸಾ.ಪ. ಅಧ್ಯಕ್ಷ ಸುಬ್ಬಯ್ಯ ನಾಯ್ಕ ಸಾಹಿತ್ಯವನ್ನು ಪ್ರತಿ ಹಳ್ಳಿಗೆ ತಲುಪಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದರು.
ಇದನ್ನೂ ಓದಿ – ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ : ಪಡೆಯಿರಿ ಅತ್ಯುತ್ತಮ ಸಂಬಳ.
ವೇದಿಕೆಯ ಮೇಲೆ ಪಂಚಾಯತ್ ಸದಸ್ಯ ಮಂಜುನಾಥ್ ನಾಯ್ಕ, ಪರಿಷತ್ತಿನ ಪ್ರತಿನಿಧಿ ಸಂಧ್ಯಾ ಭಟ್ಟ ಕೂಜಳ್ಳಿ, ಗೌರವ ಕಾರ್ಯದರ್ಶಿ ಪ್ರದೀಪ ನಾಯಕ ಉಪಸ್ಥಿತರಿದ್ದರು. ಉಪನ್ಯಾಸಕ ಪ್ರಮೋದ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ರಾಘವೇಂದ್ರ ನಾಯ್ಕ ವಂದಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.
ಮಾಹಿತಿ ಹಾಗೂ ಜಾಬ್ ನ್ಯೂಸ್ ಗಳಿಗಾಗಿ ಈ ಲಿಂಕ್ ಒತ್ತಿ – https://satwadhara.news/category/informations/