ಪುಣೆಯ ಗಾನವರ್ಧನ ಟ್ರಸ್ಟ್ ಹಾಗೂ ಸ್ವರಮಯೀ ಗುರುಕುಲ ಇವರ ಸಹಯೋಗದಿಂದ ಆಯೋಜಿಸಿದ “ಅಂತರಾಷ್ಟ್ರೀಯ ಸ್ವರಪ್ರಭಾ ಸಂಗೀತ ಸ್ಪರ್ಧೆ-2022” ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಂಜುಗುಣಿ ಸಮೀಪದ ಗಿಳಿಗುಂಡಿಯ ಕುಮಾರಿ ಸಂಗೀತಾ ಹೆಗಡೆ ಇವರು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಇತ್ತೀಚೆಗೆ ಪುಣೆಯಲ್ಲಿ ನಡೆದ ಸಮಾರಂಭವೊoದ ರಲ್ಲಿ ಯುಗ ಕಂಡoತಹ ಶ್ರೇಷ್ಠ ಗಾಯಕಿ ಪದ್ಮವಿಭೂಷಣ ಡಾ. ಪ್ರಭಾ ಅತ್ರೆ ಇವರ ಹಸ್ತದಿಂದ ಪುರಸ್ಕಾರವನ್ನು ಪಡೆಯುವ ಸೌಭಾಗ್ಯ ಸಂಗೀತಾ ಹೆಗಡೆ ಇವರಿಗೆ ದೊರಕಿದೆ.

RELATED ARTICLES  ಡೆಂಗ್ಯೂ ಮುನ್ನೆಚ್ಚರಿಕೆ ಅಗತ್ಯ

ಇದನ್ನೂ ಓದಿ – ನಗ್ನವಾಗಿ ಓಡಾಡಿ ಪ್ರವಾಸಿಗರಿಗೆ ಮುಜುಗರ ಉಂಟು ಮಾಡುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿ : ಪೊಲೀಸರಿಂದ ಮಾನವೀಯ ಕಾರ್ಯ

ಇದಲ್ಲದೇ ಕೊಲ್ಕತ್ತಾದ ಪ್ರಸಿದ್ಧ ಗಾಯಕಿ “ವಿದುಷಿ ಕೌಶಿಕಿ ಚಕ್ರವರ್ತಿ ಇವರು ಉಸ್ತಾದ್ ಬಡೆ ಗುಲಾಂ ಅಲಿ ಖಾನ್ ಹಾಗೂ ಪಂ. ಜ್ಞಾನಪ್ರಕಾಶ್ ಘೋಷ್ ಇವರ ಹೆಸರಿನಲ್ಲಿ ಏರ್ಪಡಿಸಿದ್ದ “ಗುರುಪ್ರಣಾಮ್-2022” ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಸ್ಪರ್ಧೆಯ, ಖ್ಯಾಲ್ ವಿಭಾಗದಲ್ಲಿ ಸಂಗೀತಾ ಹೆಗಡೆ ಪ್ರಥಮ ಸ್ಥಾನವನ್ನು ಪಡೆದು, ಆಯೋಜಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ದೆಹಲಿಯ “ಮಿನಿಸ್ಟ್ರಿ ಆಫ್ ಕಲ್ಚರ್ “ ವತಿಯಿಂದ, ಯುವ ಪ್ರತಿಭಾವಂತ ಕಲಾವಿದರಿಗೆ ನೀಡುವ “ಸಿ.ಸಿ.ಆರ್.ಟಿ ರಾಷ್ಟ್ರೀಯ ಯುವ ಪುರಸ್ಕಾರ” ಕ್ಕೆ ಭಾಜನರಾಗಿದ್ದಾರೆ.

RELATED ARTICLES  'ಶಕ್ತಿ ಸಂಚಯ' ಮಹಿಳಾ ಸಮಾವೇಶದ ಸಿದ್ಧತೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವ ಮಹಿಳೆಯರು.

ಸಂಗೀತಾ ಹೆಗಡೆ ಇವರು ತಮ್ಮ ಪ್ರಾಥಮಿಕ ಸಂಗೀತ ಅಭ್ಯಾಸವನ್ನು ಪಂ. ಚಂದ್ರಶೇಖರ ಪುರಾಣಿ ಕಮಠ ಇವರಲ್ಲಿ ಮಾಡಿದ್ದು, ನಂತರದಲ್ಲಿ ವಿದುಷಿ ಉಮಾ ಹೆಗಡೆ ಧಾರವಾಡ ಇವರಲ್ಲಿ ಮುಂದುವರೆಸಿದ್ದಾರೆ.