ನವಿಲಗಾರಿನ ನಾರಾಯಣ ಹೆಗಡೆ ನಿಧನ
ಶಿರಸಿ: ತಾಲೂಕಿನ ಹೊಸ್ತೋಟ ಗ್ರಾಮದ
ನವಿಲಗಾರಿನ ನಾರಾಯಣ ಹೆಗಡೆ (91) ಶುಕ್ರವಾರ ರಾತ್ರಿ ನಿಧನರಾದರು. ಉತ್ತಮ ಕೃಷಿಕರಾಗಿ ಗುರುತಿಸಿಕೊಂಡಿದ್ದ ಅವರು, ಊರಿನ ಪಟೇಲರಾಗಿ ಕೂಡಾ ಕಾರ್ಯನಿರ್ವಹಿಸಿದ್ದರು. ಮೂರು ಪುತ್ರಿಯರನ್ನು, ಎಂಟು ಪುತ್ರರನ್ನು ಅಗಲಿದ್ದಾರೆ. ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.
ಐಐಟಿಯಲ್ಲಿ ಉನ್ನತ ವ್ಯಾಸಂಗಕ್ಕೆ ಪಾರ್ಥ ಪೈ ಆಯ್ಕೆ.
ಭಟ್ಕಳ ಬಂದರ್ ರಸ್ತೆಯ ಮೈಸೂರ್ ಕೆಫೆ
ನಿವಾಸಿಯಾಗಿರುವ ಪಾರ್ಥ ಪೈ, ಮುಂಬೈ ಐಐಟಿಯಲ್ಲಿ ಉನ್ನತ ವ್ಯಾಸಂಗಕ್ಕೆ ಪಟ್ಟಣದಿಂದ ಪ್ರಪ್ರಥಮವಾಗಿ ಆಯ್ಕೆ ಆಗಿದ್ದಾರೆ. ಅಂಜನಿ ಪೈ ಹಾಗೂ ಪುಂಡಲೀಕ ಪೈ ಇವರ ಸುಪುತ್ರರಾಗಿರುವ ಪಾರ್ಥ, ಸದ್ಯ ಮಂಗಳೂರಿನ ಸಿಫಲ್ ಕಾಲೇಜನಲ್ಲಿ ಕಲಿತು ಈ ವರ್ಷ ನಡೆದ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ 372ನೇ ಕ್ಯಾಟಗರಿ ಬ್ಯಾಂಕ್ ಪಡೆದಿದ್ದರು. ಅಲ್ಲದೇ ಈ ವರ್ಷ ನಡೆದ ಸಿಇಟಿ ಪರೀಕ್ಷೆಯಲ್ಲೂ ರಾಜ್ಯಕ್ಕೆ 46ನೇ ಬ್ಯಾಂಕ್ ಗಳಿಸಿದ್ದು,ಇವರ ಸಾಧನೆಗೆ ಸಮಾಜದ ಗುರು- ಹಿರಿಯರು ಆಶೀರ್ವದಿಸಿ ಅಭಿನಂದಿಸಿದ್ದಾರೆ.
ಎಂಜಿನಿಯರಿಂಗ್ ಡಿಸೈನ್ ವಿಷಯಕ್ಕೆ ತೇಜಸ್ ಭಟ್ಟ ಆಯ್ಕೆ.
ಪಟ್ಟಣದ ನಾಯ್ಕನಕೆರೆ ನಿವಾಸಿ ತೇಜಸ್ ಭಟ್ಟ ಐಐಟಿಯಲ್ಲಿ ಪ್ರಮುಖ ಶ್ರೇಣಿಯ ಅಂಕ ಪಡೆದು ಎಂಜಿನಿಯರಿಂಗ್ ಡಿಸೈನ್ ವಿಷಯಕ್ಕೆ ಮದ್ರಾಸ್ ಐಐಟಿಯಲ್ಲಿ(ಐದು ವರ್ಷದ ಬಿಟೆಕ್ ಎಂಡ್ ಎಂಟೆಕ್ ಇಂಟಿಗ್ರೇಟೆಡ್ ಕೋರ್ಸ್) ಪ್ರವೇಶ ಪಡೆದಿದ್ದಾನೆ. ವೈಟಿಎಸ್‌ಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿರುವ ತೇಜಸ್ ಮನೆಯಲ್ಲಿಯೇ ಐಐಟಿ ಬಗ್ಗೆ ಅಧ್ಯಯನ ನಡೆಸಿ ಸಾಧನೆ ಮೆರೆದಿದ್ದಾನೆ. ಇವನು ಯಲ್ಲಾಪುರದಲ್ಲಿಯ ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಸುಬ್ರಾಯ ಭಟ್ಟ ಹಾಗೂ ದೀಪಾ ಭಟ್ ಇವರ ಪುತ್ರ.