ಕುಮಟಾ: ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಕುಮಟಾದಲ್ಲಿ ಆಯೋಜಿಸಲಾಗಿದ್ದ ರಾಷ್ಟೀಯ ಸೇವಾ ಯೋಜನೆಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಭದ್ರಕಾಳಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎಸ್.ಸಿ.ನಾಯ್ಕರವರು ಗಿಡಕ್ಕೆ ನೀರೆರೆಯುವುದರ ಮೂಲಕ ಕರ‍್ಯಕ್ರಮವನ್ನು ಉದ್ಘಾಟಿಸಿ ಎನ್.ಎಸ್.ಎಸ್. ಯೋಜನೆ ಪ್ರಾರಂಭವಾದುದರ ಔಚಿತ್ಯ ಹಾಗೂ ಮಹತ್ವದ ಕುರಿತು ಮಾತನಾಡಿದರು. ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರೀತಿ ಪಿ. ಭಂಡಾರಕರ್ ಇವರು ಮಾನವೀಯತೆ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಎಲ್ಲರನ್ನು ಉದ್ದೇಶಿಸಿ ಮಾತನಾಡಿದರು. ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ಪ್ರೋ. ಉಮೇಶನಾಯ್ಕ ಇವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಯೋಜನಾ ಅಧಿಕಾರಿ ಪ್ರೋ. ರೇಖಾ ಯಲಿಗಾರ, ವಿಶೇಷ ಅತಿಥಿಗಳಾಗಿ ಸಹಾಯಕ ಪೋಲಿಸ್ ಸಬ್ ಇನ್ಸೆಪೆಕ್ಟರ್ ಶ್ರೀ. ಮಂಜುನಾಥ
ನಾಯ್ಕ ಹಾಗೂ ಉದ್ದಿಮೆದಾರರಾದ ಶ್ರೀ ದಿನೇಶ ನಾಯ್ಕ ರವರು ಹಾಜರಿದ್ದರು. ಹಾಗೂ ರಾಷ್ಟೀಯ ಭಾವೈಕ್ಯತಾ ಗೀತೆಯನ್ನು ಸಹನಾ ಸಂಗಡಿಗರು ಸುಶ್ರಾವ್ಯವಾಗಿ ಹಾಡಿದರು.