ಕಾರವಾರ: ಕಳೆದ ಅನೇಕ ವರ್ಷಗಳಿಂದ ರಾಷ್ಟ್ರಾದ್ಯಂತ ಹಿಂದೂಗಳ ಮತ್ತು ಹಿಂದೂ ಕಾರ್ಯಕರ್ತರ ನಿರಂತರ ಹತ್ಯೆಗಳನ್ನು ನಡೆಸಿ ಜಿಹಾದಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಅಲ್ಲದೇ, ಬಾಜಪದ ನೂಪುರ್ ಶರ್ಮ ಅವರ ಅವಹೇಳನಕಾರಿ ವಿಷಯ ಹೇಳಿದರು ಎಂದು ‘ಸರ್ ತನ್ ಸೆ ಜುದಾ’ ಈ ಅಭಿಯಾನವನ್ನು ನಡೆಸುತ್ತಿದ್ದಾರೆ. ಹೆಚ್ಚಿನ ಹಿಂದೂ ಕಾರ್ಯಕರ್ತರ ಹತ್ಯೆಯ ಸಂದರ್ಭದಲ್ಲಿ ಇಂತಹ ಜಿಹಾದಿ ಚಟುವಟಿಕೆಗಳಿಗೆ ಪಿ. ಎಫ್. ಐ ಮತ್ತು ಎಸ್.ಡಿ.ಪಿ ಐ ಗಳಂತಹ ಸಂಘಟನೆಗಳು ನೆರವು ನೀಡುತ್ತುರುವುದನ್ನು ವಿರೋಧಿಸಿ ಮತ್ತು ಇಂತಹ ಸಂಘಟನೆಗಳನ್ನು ರಾಷ್ಟ್ರಾದ್ಯಂತ ನಿಷೇಧಿಸಬೇಕು ಎಂದು ಒತ್ತಾಯಿಸಿ ಇಂದು ಹಿಂದೂ ಜನಜಾಗೃತಿ ಸಮಿತಿ ಮತ್ತು ಅನೇಕ ಹಿಂದೂಪರ ಕಾರ್ಯಕರ್ತರು ಸೇರಿ ಇಂದು ಉತ್ತರಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರೀಯ ಗೃಹ ಮಂತ್ರಿಗಳಿಗೆ ಮನವಿಯನ್ನು ನೀಡಲಾಯಿತು.
ಇದೇ ಸಂಧರ್ಭದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ಜಿಹಾದಿ ಚಟುವಟಿಕೆ ಗಳಿಗೆ ಯಾರು ಹಣ ನೀಡುತ್ತಿದ್ದಾರೆ, ಯಾರು ಇಂತಹ ಜಿಹಾದಿಗಳನ್ನು ಪ್ರಚೋದಿಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು. ಈ ಪಿತೂರಿ, ತರಬೇತಿ, ಆಶ್ರಯ, ಸೈದ್ಧಾಂತಿಕ ನಿರ್ದೇಶನ ನೀಡುವಲ್ಲಿ ಭಾಗಿಯಾಗಿರುವ ಮುಸ್ಲಿಂ ಮುಖಂಡರು, ಧರ್ಮಗುರುಗಳು, ಚಿಶ್ತಿಗಳು, ಧಾರ್ಮಿಕ ಮುಖಂಡರು ಮತ್ತು ಮುಸ್ಲಿಂ ಸಂಘಟನೆಗಳ ವಿರುದ್ಧ ಸಂಘಟಿತ ಅಪರಾಧ ಕಾಯ್ದೆಯಡಿ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಬೇಕು. ಹಿಂದೂಗಳ ಹತ್ಯೆಗಳ ಪ್ರಕರಣದಲ್ಲಿ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಮತ್ತು ಅಪರಾಧಿಗಳಿಗೆ ತಕ್ಷಣ ಮರಣದಂಡನೆ ವಿಧಿಸಬೇಕು. ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಮದರಸಾಗಳ ವಿರುದ್ಧ ಕ್ರಮ ಕೈಗೊಂಡು ಅವುಗಳನ್ನು ಕೂಡಲೇ ಮುಚ್ಚಬೇಕು. ಈ ಘಟನೆಗಳ ಹಿಂದೆ ಪಾಕಿಸ್ತಾನ, ಬಾಂಗ್ಲಾದೇಶ ಇತ್ಯಾದಿ ದೇಶಗಳ ಕೈವಾಡವಿದೆಯೇ, ಇದು ಅಂತಾರಾಷ್ಟ್ರೀಯ ಷಡ್ಯಂತ್ರವೇ ಎಂಬುದನ್ನು ಕೂಲಂಕುಷವಾಗಿ ತನಿಖೆ ನಡೆಸಬೇಕೆಂಬುದು ಒತ್ತಾಯಿಸಲಾಯಿತು.
ಈ ಸಂಧರ್ಭದಲ್ಲಿ ಹಿಂದುತ್ವನಿಷ್ಟರಾದ ಬಾಬು ಅಂಬಿ, ಉಲ್ಲಾಸ್ ಮುಂಜು, ಅಮಿತ್ ದಳವಿ, ಪಾಂಡರಿನಾಥ ಗುರಾವ್ ಹಿಂದೂ ಜನಜಾಗೃತಿ ಸಮಿತಿಯ ಸಾಗರ್ ಕುರ್ಡೆಕರ ಸನಾತನ ಸಂಸ್ಥೆಯ ಸೋಮೇಶ್ ಗುರವ, ಸುರೇಖಾ ಗುರವ , ಅಶೋಕ್ ಚೌಹಾಣ್ ಮುಂತಾದವರು ಉಪಸ್ಥಿತರಿದ್ದರು.