ಮುಂಡಗೋಡ: ಅರಣ್ಯ ಭೂಮಿ ಹಕ್ಕು ನೀಡುವಲ್ಲಿ ಸರಕಾರ ವೈಪಲ್ಯವಾಗುತ್ತಿದ್ದು, ಭೂಮಿ ಹಕ್ಕಿಗಾಗಿ ಉಗ್ರರೂಪದ ಹೋರಾಟ ಅನಿವಾರ್ಯ ಈ ದಿಶೆಯಲ್ಲಿ ಪಕ್ಷಾತೀತವಾಗಿ ಜನಪ್ರತಿನಿಧಿಗಳ ಮನೆಯ ಮುಂದೆ ಧರಣಿ ಮಾಡುವದು ಅನಿವಾರ್ಯವಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಹೇಳಿದರು. ಅವರು ಇಂದು ಮುಂಡಗೋಡ ತಾಲೂಕಿನ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಕಾರಿ ಸಮಿತಿಯ ಪಧಾದಿಕಾರಿಯನ್ನು ಉದ್ದೇಶಿಸಿ ಮಾತನಾಡಿದರು.

RELATED ARTICLES  ನಾಡಕಛೇರಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕಿ ಶಾರದಾ ಮೋಹನ ಶೆಟ್ಟಿ

ಅರಣ್ಯ ಭೂಮಿ ಹಕ್ಕು ನೀಡುವಲ್ಲಿ ಜನಪ್ರತಿನಿಧಿಗಳು ಬದ್ಧತೆಯನ್ನು ಪ್ರದರ್ಶಿಸಬೇಕು. ಜಿಲ್ಲೆಯ ಒಂದು ಮೂರರಷ್ಟು ಇರುವ ಅರಣ್ಯ ಅತಿಕ್ರಮಣದಾರರ ಕುಟುಂಬಗಳಿಗೆ ಭೂಮಿ ಹಕ್ಕು ನೀಡುವಲ್ಲಿ ಸರಕಾರ ವಿಫಲವಾದಲ್ಲಿ ಜಿಲ್ಲೆಯು ನಿರಾಶ್ರಿತರ ಜಿಲ್ಲೆಯಾಗುವುದರಲ್ಲಿ ಸಂಶಯವಿಲ್ಲ. ಈ ದಿಶೆಯಲ್ಲಿ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಹೇಳಿದರು.


ಸಭೆಯ ಅಧ್ಯಕ್ಷತೆಯನ್ನ ತಾಲೂಕಧ್ಯಕ್ಷ ಶಿವಾನಂದ ಜೋಗಿ ವಹಿಸಿದ್ದರು. ಸಭೆಯಲ್ಲಿ ಶಬ್ಬೀರ್ ಸಾಬ ಚಪಾತಿ, ಶೇಖಯ್ಯ ಹಿರೇಮಠ, ಅರ್ಜುನ ಚನ್ನಾಪುರ, ಮಲ್ಲಿಕಾರ್ಜುನ ಓಣಿಕೇರಿ, ಅಝಾದ್ ಅಬ್ದುಲ್ ಸಾಬ, ನಜೀರ್ ಸಾಬ ಬೊಮ್ಮನಳ್ಳಿ, ವಿರಭದ್ರಪ್ಪ ಹುನಗುಂದ ಮಾತನಾಡಿದರು. ವೇದಿಕೆಯ ಮೇಲೆ ಶಂಕ್ರಪ್ಪ ಗಳಗಿ, ನೀಸಾರ್ ಅಹ್ಮದ್ ಹುಬ್ಬಳ್ಳಿ ನಾಗನೂರು, ಮಾರುತಿ ಗಣೇಶಪುರ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾದ್ಯಂತ ಅರಣ್ಯ ಭೂಮಿ ಹಕ್ಕಿಗಾಗಿ ಉಗ್ರ ಹೋರಾಟ ಹಮ್ಮಿಕೊಳ್ಳಲು ಹಾಗೂ ಸುಫ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರವಾಗಿ ಸಮರ್ಥ ಕಾನುನೂ ತಜ್ಞರೊಂದಿಗೆ ಹೋರಾಟ ಜರುಗಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.

RELATED ARTICLES  ಆರ್ ಬಿ ಕಂಪನಿಯ ಕಾಮಗಾರಿಯಿಂದ ಆಗುವ ಅವಘಡವನ್ನು ತಡೆಗೆ ಮನವಿ: ಕರ್ನಾಟಕ ರಕ್ಷಣಾ ವೇದಿಕೆಯಿಂದ ಡಿ.ಸಿ ಭೇಟಿ.