ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲಾ ಅಕ್ರಮ ದಂದೆಗಳಿಗೆ ಕಡಿವಾಣ ಹಾಕಿ, ಜಿಲ್ಲೆಯಲ್ಲಿ ಸಾರ್ವಜನಿಕರು ಶಾಂತಿ, ನೆಮ್ಮದಿಯಿಂದ ಇರಲು ಹಗಲು-ರಾತ್ರಿ ಪರಿಶ್ರಮಿಸಿದ ದಕ್ಷ ಮತ್ತು ಪ್ರಾಮಾಣಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಸುಮನ್ ಪನ್ನೇಕರ್ ಅವರನ್ನು ಜಿಲ್ಲೆಯಿಂದ ವರ್ಗಾಯಿಸದಂತೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಸುಮನ್ ಪನ್ನೇಕರ್ ಅವರು ರ‍್ವ ಮಹಿಳೆಯಾಗಿ, ಯಾರಿಗೂ ಅಂಜದೇ ಜಿಲ್ಲೆಯಲ್ಲಿ ಕಾನೂನು ಮತ್ತು ಶಿಸ್ತು ಪಾಲನೆ ಮಾಡುತ್ತಿರುವುದನ್ನು ಜಿಲ್ಲೆಯ ಜನ ಮೆಚ್ಚಲೇ ಬೇಕು. ಇಂತಹ ದಕ್ಷ ಅಧಿಕಾರಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅನೇಕ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದರಿಂದ, ಅನೇಕ ಸಮಾಜ ದ್ರೋಹಿಗಳನ್ನು ಎದುರು ಹಾಕಿಕೊಳ್ಳುವಂತಾಯಿತು. ಈ ರೀತಿಯ ಸಮಾಜ ದ್ರೋಹಿಗಳೊಂದಿಗೆ, ಸಮಾಜದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮತ್ತು ರಾಜಕಾರಣಿಗಳು ಕೈ ಜೋಡಿಸಿ ಶ್ರೀಮತಿ ಸುಮನ್ ಪನ್ನೇಕರ್ ಅವರನ್ನು ಸರಕಾರದ ಮಟ್ಟದಲ್ಲಿ ಜಿಲ್ಲೆಯಿಂದಾ ವರ್ಗಾಯಿಸಲು ಮುಂದಾಗಿರುವುದು ತೀರಾ ವಿಷಾದನೀಯ ಸಂಗತಿ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್ ತೆಂಗೇರಿ ಹೇಳಿದ್ದಾರೆ. ದಕ್ಷ ಪೊಲೀಸ ವರಿಷ್ಢಾಧಿಕಾರಿ ಶ್ರೀಮತಿ ಸುಮನ್ ಪನ್ನೇಕರ್ ಅವರ ಪ್ರಾಮಾಣಿಕ ಸೇವೆ ಉತ್ತರ ಕನ್ನಡ ಜಿಲ್ಲೆಗೆ ತೀರಾ ಅವಶ್ಯಕತೆ ಇದ್ದು, ಅವರನ್ನು ಜಿಲ್ಲೆಯಿಂದಾ ಯಾವುದೇ ಕಾರಣಕ್ಕೂ ವರ್ಗಾಯಿಸದಂತೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್ ತೆಂಗೇರಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

RELATED ARTICLES  ಎಸ್ಸೆಸ್ಸೆಲ್ಸಿ ನಂತರ ಮುಂದೇನು: ವಿವಿವಿ ಮಾರ್ಗದರ್ಶನ ಶಿಬಿರ